ಚಿಕ್ಕಮಗಳೂರು: ನಿಷೇಧಾಜ್ಞೆ ನಡುವೆಯೂ ಮಹಿಷ ದಸರಾ ಆಚರಣೆ ಮಾಡಲು ಮುಂದಾದ ದಲಿತ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಬಂದಿಸಿದ್ದಾರೆ.
ನಗರದ ಹನುಮಂತಪ್ಪ ವೃತ್ತದಲ್ಲಿ ಅಂಗಡಿ ಚಂದ್ರು ನೇತೃತ್ವದಲ್ಲಿ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಮಹಿಷಾಸುರನ ಭಾವಚಿತ್ರ ಪ್ರದರ್ಶಿಸಿದ್ದಾರೆ. ಪೊಲೀಸರು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಕಾರ್ಯಕರ್ತರು ಮತ್ತು ಪೋಲೀಸರ ನಡುವೆ ವಾಗ್ವಾದ ನಡೆದಿದೆ. ಅಲ್ಲದೆ, ಮಹಿಷಾಸುರ ದಸರಾ ಆಚರಣೆಗೆ ಅವಕಾಶ ನೀಡದ ಸರಕಾರದ ವಿರುದ್ದ ಆಕ್ರೋಶಿತ ಕಾರ್ಯಕರ್ತರು ಕಿಡಿ ಕಾರಿದ್ದಾರೆ.