1ಸಾವಿರ ರೂ. ಕರೆನ್ಸಿ ಮತ್ತೆ ಚಲಾವಣೆ: ಊಹಾಪೋಹಕ್ಕೆ ಆರ್​ಬಿಐ ತೆರೆ

Prasthutha|

ನವದೆಹಲಿ: ಕೇಂದ್ರ ಸರ್ಕಾರ ಕಳೆದ ವಾರ 2 ಸಾವಿರ ರೂ. ನೋಟುಗಳನ್ನು ಹಿಂದೆಗೆದುಕೊಂಡ ಬಳಿಕ ಮತ್ತೆ 1ಸಾವಿರ ರೂ. ಕರೆನ್ಸಿ ಮರಳಿ ತರಬಹುದು ಎಂಬ ಸುದ್ದಿ ಹರಡುತ್ತಿದೆ. ಈ ಬಗ್ಗೆಗಿನ ಚರ್ಚೆಗೆ, ಊಹಾಪೋಹಕ್ಕೆ ಆರ್​ಬಿಐ ತೆರೆ ಎಳೆದಿದೆ. 1 ಸಾವಿರ ಮತ್ತು 2 ಸಾವಿರ ರೂಪಾಯಿ ನೋಟುಗಳನ್ನು ಮರು ಚಲಾವಣೆಗೆ ತರುವ ಯಾವುದೇ ಪ್ರಸ್ತಾಪವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

- Advertisement -

2016 ರ ನವೆಂಬರ್​ ನಲ್ಲಿ ಹಳೆಯ 500ರೂ. ಜತೆಗೆ 1ಸಾವಿರ ರೂ.ನೋಟುಗಳನ್ನು ಅಮಾನ್ಯಗೊಳಿಸಲಾಯಿತು. ಬಳಿಕ ಐನೂರು ರೂ. ಮತ್ತು ಎರಡು ಸಾವಿರ ರೂ.ನ ಹೊಸ ನೋಟುಗಳು ಬಂದವು. ಮತ್ತೆ 2 ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಅನಿರೀಕ್ಷಿತವಾಗಿ ಹಿಂದೆಗೆದುಕೊಳ್ಳಲಾಯಿತು.

Join Whatsapp