ಮಂಗಳೂರಿನ ಅಗ್ನಿಶಾಮಕ ಠಾಣೆಯ ಪಾರ್ಕಿಂಗ್ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

Prasthutha|

ಮಂಗಳೂರು : ನಗರದ ಬಾರೆಬೈಲ್ ನಲ್ಲಿರುವ ಅಗ್ನಿಶಾಮಕ ಠಾಣೆಯ ವಾಹನ ನಿಲುಗಡೆಯ ಕಟ್ಟಡದಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

- Advertisement -

ಬಂಟ್ವಾಳ ತಾಲೂಕಿನ ಅಮ್ಮುಂಜೆಯ ದೀಪಕ್ (29) ಎಂಬ ಕಾರ್ಮಿಕ, ಕಟ್ಟಡಕ್ಕೆ ಶೀಟ್ ಅಳವಡಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಬಾರೆಬೈಲ್ನಲ್ಲಿರುವ ಅಗ್ನಿಶಾಮಕ ಠಾಣೆಯ ವಾಹನ ನಿಲುಗಡೆಯ ಕಟ್ಟಡಕ್ಕೆ ಶೀಟ್ ಅಳವಡಿಸುವ ಗುತ್ತಿಗೆಯನ್ನು ಪ್ರವೀಣ್ ಎಂಬವರಿಗೆ ವಹಿಸಿತ್ತು. ಅದರಂತೆ ಗುತ್ತಿಗೆದಾರ ಪ್ರವೀಣ್ ರೊಂದಿಗೆ 8 ವರ್ಷದಿಂದ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದ ದೀಪಕ್ ಎಂಬುವವರು ಕಳೆದ ಒಂದು ವಾರದಿಂದೀಚೆಗೆ ಈ ಕಟ್ಟಡಕ್ಕೆ ಶೀಟ್ ಅಳವಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

- Advertisement -

ಮಂಗಳವಾರ ಬೆಳಗ್ಗೆ ಸುಮಾರು 9.50ಕ್ಕೆ ದೀಪಕ್ ಕಟ್ಟಡದ ಮೇಲ್ಛಾವಣಿ ಅಳವಡಿಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 30 ಅಡಿ ಆಳಕ್ಕೆ ಬಿದ್ದಿದ್ದು, ತಕ್ಷಣ ಅವರನ್ನು ಇತರ ಕೆಲಸಗಾರರು ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ದೀಪಕ್ ಮೃತಪಟ್ಟಿದ್ದಾರೆ .

ದೀಪಕ್ ಅವರಿಗೆ ಸುರಕ್ಷಾ ಕವಚಗಳನ್ನು ಗುತ್ತಿಗೆದಾರ ಪ್ರವೀಣ್ ಅವರು ನೀಡದ ಕಾರಣ ಈ ದುರಂತ ಸಂಭವಿಸಿದೆ ಎಂದು ದೀಪಕ್ರ ಭಾವ ನಾಗೇಶ್ ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀತ್ ಮತ್ತು ಗುತ್ತಿಗೆದಾರ ಪ್ರವೀಣ್ ಹಾಗೂ ಕಾಮಗಾರಿಯ ಉಸ್ತುವಾರಿ ವಹಿಸಿದದ ನಿರ್ಮಿತಿ ಕೇಂದ್ರದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Join Whatsapp