ಡೋಕ್ಲಾಂ ಪ್ರಸ್ಥಭೂಮಿಯ ಬಳಿ ಚೀನಾ ಕಾರುಬಾರು: ಭಾರತೀಯ ಸೇನೆಯ ಬೈಪಾಸ್‌ಗೆ ಪ್ರಯತ್ನ!?

Prasthutha|

ನವದೆಹಲಿ: 2017 ರಲ್ಲಿ ಭಾರತ ಮತ್ತು ಚೀನೀ ಪಡೆಗಳು ಮುಖಾಮುಖಿಯಾದ ಡೋಕ್ಲಾಮ್ ಪ್ರಸ್ಥಭೂಮಿ ( ಎತ್ತರದ ಸಮತಲದ ಭೂಮಿ)ಯ ಪೂರ್ವಕ್ಕೆ 9 ಕಿಮೀ ದೂರದಲ್ಲಿ ನಿರ್ಮಿಸಲಾದ ಚೀನಾದ ಹಳ್ಳಿಯ ಪ್ರತಿ ಮನೆಯ ಬಾಗಿಲಲ್ಲಿ ಕಾರುಗಳನ್ನು ನಿಲ್ಲಿಸಲಾಗಿರುವ ಉಪಗ್ರಹ ಚಿತ್ರಗಳನ್ನು ಖಾಸಗೀ ವಾಹಿನಿ  NDTV ಬಿಡುಗಡೆಗೊಳಿಸಿದೆ.

- Advertisement -

ಈ ವಿವಾದಿತ ಭೂಪ್ರದೇಶವು ಭೂತಾನ್ ವ್ಯಾಪ್ತಿಗೆ ಬರುತ್ತಿದ್ದು, ಭೂತಾನ್ ಈ ಪ್ರದೇಶವನ್ನು ಪಾಂಗ್ಡಾ ಎಂದು ಕರೆಯುತ್ತಿದೆ  ಎಂದು ndtv 2021ರಲ್ಲಿ ವರದಿ ಮಾಡಿತ್ತು. ಅಮೋ ಚು ನದಿಯ ದಡದಲ್ಲಿರುವ ಈ ಪ್ರದೇಶವು ಚೀನಾ ಆಕ್ರಮಣಕ್ಕೊಳಗಾದ ಪ್ರದೇಶವಾಗಿದೆ.

ಚೀನಾವು ಅಮೊ ಚು ನದಿಯ ತೀರದಲ್ಲಿ ಈ ರೀತಿಯ ನಿರ್ಮಾಣ ಮಾಡುವುದರಿಂದ  ಡೋಕ್ಲಾಂ ಪ್ರಸ್ಥಭೂಮಿಯ ಭಾರತದ ಆಯಕಟ್ಟಿನ ಪ್ರದೇಶಗಳಿಗೆ ಚೀನಾ ಸೇನೆಗೆ ಪ್ರವೇಶಿಸಲು ಸಹಕಾರಿಯಾಗಲಿದೆ. ಅಲ್ಲದೇ ಭಾರತದ ಸೂಕ್ಷ್ಮವಾದ ಸಿಲಿಗುರಿ ಕಾರಿಡಾರ್‌ಗೆ ನೇರವಾದ ಸಂಪರ್ಕ ರೇಖೆಯನ್ನು ಕಲ್ಪಿಸುತ್ತಿದ್ದು, ಇದು ಈಶಾನ್ಯ ರಾಜ್ಯಗಳ ಮೂಲಕ ದೇಶದ ಇತರ ಭಾಗಗಳಿಗೆ ಸಂಪರ್ಕಿಸಲು ಸಹಕಾರಿಯಾಗಲಿದೆ.

- Advertisement -

2017ರಲ್ಲಿ ಭಾರತೀಯ ಸೈನಿಕರು ಡೋಕ್ಲಾಮ್‌ನಲ್ಲಿರುವ ಜಂಪೇರಿ ಎಂಬ ಈ ಪರ್ವತಕ್ಕೆ ಚೀನಾದವರನ್ನು ಬರದಂತೆ ದೈಹಿಕವಾಗಿ ತಡೆದಿದ್ದರು. ಆದರೆ ಇದೀಗ ಪರ್ಯಾಯ ವ್ಯವಸ್ಥೆ ಮೂಲಕ ಚೀನಾ ಸೇನೆ ಅದೇ ಪರ್ವತವನ್ನು ಸಮೀಪಿಸಿ ಭಾರತೀಯ ಸೇನೆಯ ಬೈಪಾಸ್‌ಗೆ ಪ್ರಯತ್ನಿಸುತ್ತಿದೆ ಎಂಬ ಆತಂಕ ಎದುರಾಗಿದೆ.

Join Whatsapp