ದೇಶ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ: ಪಾಕ್ ಸೇರಿಸಿ 103 ದೇಶಗಳಿಗೆ ವಾಸ ಬದಲಿಸಿದ ಭಾರತೀಯರು

Prasthutha|

ನವದೆಹಲಿ: ಇತ್ತೀಚೆಗೆ ವಿವಿಧ ಕಾರಣಗಳಿಂದ ದೇಶ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 2021ರಲ್ಲಿ ಮಾತ್ರ ಒಟ್ಟು 1,63,370 ಭಾರತೀಯರು ದೇಶದ ಪೌರತ್ವವನ್ನು ತ್ಯಜಿಸಿ, ಇತರ ದೇಶಗಳಿಂದ ಪೌರತ್ವವನ್ನು ಪಡೆದ್ದಾರೆ. ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ಬಹುದೊಡ್ಡ ಸಂಖ್ಯೆ ಎಂದು ತಿಳಿದು ಬಂದಿದೆ.

- Advertisement -

ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ 2019ರಲ್ಲಿ 1,44,017 ಹಾಗೂ 2020ರಲ್ಲಿ 85,256 ಆಗಿದೆ. 2021 ರಲ್ಲಿ ಗರಿಷ್ಠ 78,284 ಭಾರತೀಯರು ದೇಶದ ಪೌರತ್ವವನ್ನು ತ್ಯಜಿಸಿ ಅಮೆರಿಕದಲ್ಲಿ ಪೌರತ್ವವನ್ನು ಪಡೆದಿದ್ದಾರೆ. ಇದೇ ಭಾರತದ ಪೌರತ್ವ ತ್ಯಜಿಸಿ ಆಸ್ಟ್ರೇಲಿಯಾದಲ್ಲಿ 23,533 ಮಂದಿ ಪೌರತ್ವ ಪಡೆದಿದ್ದಾರೆ. ಕೆನಡಾದಲ್ಲಿ 21,597 ಮಂದಿ ಬ್ರಿಟನ್ನಲ್ಲಿ 14,637 ಮಂದಿ ಭಾರತದ ಪೌರರು ಈಗ ಅಲ್ಲೇ ವಾಸಿಸುತ್ತಿದ್ದಾರೆ

ಕಳೆದ ಮೂರು ವರ್ಷಗಳಲ್ಲಿ  ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ ಕ್ರಮವಾಗಿ 1,44,017, 85,256, ಮತ್ತು 1,63,370″ ಎಂದು ಉಲ್ಲೇಖಿಸಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಯಲ್ಲಿ ಈ ದತ್ತಾಂಶದ ಮಾಹಿತಿಯನ್ನು ನೀಡಿದ್ದಾರೆ.

- Advertisement -

ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ ಮತ್ತು ಅವರು ಪೌರತ್ವವನ್ನು ಪಡೆದ ದೇಶಗಳಿಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಒದಗಿಸಿದ ವಿವರಗಳನ್ನು ಸಚಿವ ನಿತ್ಯಾನಂದ ರೈ ಮುಂಗಾರು ಅಧಿವೇಶನದಲ್ಲಿ ತಿಳಿಸಿದ್ದಾರೆ. ಭಾರತೀಯ ಪೌರತ್ವವನ್ನು ತ್ಯಜಿಸಲು ಈ ವ್ಯಕ್ತಿಗಳು ನೀಡಿದ ಕಾರಣಗಳ ಬಗ್ಗೆ ಕೇಳಿದಾಗ ಅವರ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ನಿತ್ಯಾನಂದ ರೈ ಹೇಳಿದರು.

ಭಾರತೀಯರು ಭಾರತೀಯ ಪೌರತ್ವವನ್ನು ತ್ಯಜಿಸಿ ಜಗತ್ತಿನ 103 ದೇಶಗಳಲ್ಲಿ ನೆಲೆಸಿದ್ದಾರೆ ಎಂದು ಸಚಿವರು ಒದಗಿಸಿದ ಅಂಕಿ ಅಂಶಗಳು ತಿಳಿಸಿವೆ. ಆ ದೇಶಗಳಲ್ಲಿ ಅಂಗೋಲಾ, ಅರ್ಜೆಂಟೀನಾ, ಅರ್ಮೇನಿಯಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಅಜೆರ್ಬೈಜಾನ್, ಬಹ್ರೇನ್, ಬಾಂಗ್ಲಾದೇಶ, ಬೆಲ್ಜಿಯಂ, ಬೋಟ್ಸ್ವಾನಾ, ಬ್ರೆಜಿಲ್, ಬ್ರೂನಿ, ಬಲ್ಗೇರಿಯಾ, ಬುರ್ಕಿನಾ ಫಾಸೊ, ಕೆನಡಾ, ಚಿಲಿ, ಚೀನಾ, ಕೊಲಂಬಿಯಾ, ಕ್ರೊಯೇಷಿಯಾ, ಸೈಪ್ರಸ್, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಡೆನ್ಮಾರ್ಕ್ , ಯುನೈಟೆಡ್ ಕಿಂಗ್ಡಮ್, ಇಥಿಯೋಪಿಯಾ, ಫಿಜಿ, ಫಿನ್ಲ್ಯಾಂಡ್, ಫ್ರಾನ್ಸ್ ಜರ್ಮನಿಯಲ್ಲಿ ನೆಲೆಸಿದ್ದಾರೆ.

ಘಾನಾ, ಗ್ರೀಸ್, ಹಂಗೇರಿ, ಐಸ್ಲ್ಯಾಂಡ್, ಇಂಡೋನೇಷ್ಯಾ, ಇರಾನ್, ಇರಾಕ್, ಇಸ್ರೇಲ್, ಇಟಲಿ, ಜಮೈಕಾ, ಜಪಾನ್, ಜೋರ್ಡಾನ್, ಕಝಾಕಿಸ್ತಾನ್, ಕೀನ್ಯಾ, ಕುವೈತ್, ಲಾವೋಸ್, ಮಡಗಾಸ್ಕರ್, ಮಲಾವಿ, ಮಲೇಷ್ಯಾ , ಮಾಲ್ಡೀವ್ಸ್, ಮಾಲಿ ಮಾಲ್ಟಾ, ಮಾರಿಷಸ್, ಮೆಕ್ಸಿಕೋ, ಮಂಗೋಲಿಯಾ, ಮೊರಾಕೊ, ಮೊಜಾಂಬಿಕ್, ಮ್ಯಾನ್ಮಾರ್, ನಮೀಬಿಯಾ, ನೇಪಾಳ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ನೈಜೀರಿಯಾ, ನಾರ್ವೆ, ಓಮನ್, ಪಾಕಿಸ್ತಾನ, ಪನಾಮ, ಪಪುವಾ ನ್ಯೂ ಗಿನಿಯಾ, ಪೆರು, ಫಿಲಿಪೈನ್ಸ್, ಪೋಲೆಂಡ್ ಮತ್ತು ಪೋರ್ಚುಗಲ್ ಇವೇ ಮೊದಲಾದವುಗಳಾಗಿವೆ.

ಅಲ್ಲದೆ ಕತಾರ್, ಐರ್ಲೆಂಡ್, ರಿಯೂನಿಯನ್ ದ್ವೀಪ, ರೊಮೇನಿಯಾ, ರಷ್ಯಾ, ಸೌದಿ ಅರೇಬಿಯಾ, ಸೆರ್ಬಿಯಾ, ಸೀಶೆಲ್ಸ್, ಸಿಂಗಾಪುರ್, ಸ್ಲೋವಾಕಿಯಾ, ಸ್ಲೋವೇನಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಸ್ಪೇನ್, ಶ್ರೀಲಂಕಾ, ಸುಡಾನ್, ಸುರಿನಾಮ್, ಸ್ವೀಡನ್, ಸ್ವಿಟ್ಜರ್ಲೆಂಡ್, ತಾಂಜಜಾನಿಯಾ, ಥೈಲ್ಯಾಂಡ್, ಟ್ರಿನಿಡಾಡ್ ಮತ್ತು ಟೊಬಾಗೊ , ಟರ್ಕಿ, ಉಗಾಂಡಾ, ಉಕ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್, USA, ವೆನೆಜುವೆಲಾ, ಜಾಂಬಿಯಾ ಮತ್ತು ಜಿಂಬಾಬ್ವೆ ಇತರ ದೇಶಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿ ಅಲ್ಲಿ ನೆಲೆಸಿದ್ದಾರೆ ಎಂದು ಅಧಿವೇಶನಕ್ಕೆ ಮಾಹಿತಿ ನೀಡಲಾಗಿದೆ.

ವಿಶೇಷವಾಗಿ ಅಧಿಕ ಶ್ರೀಮಂತರು ದೇಶ ತ್ಯಜಿಸುತ್ತಿದ್ದು, ಆರ್ಥಿಕ ಮುಗ್ಗಟ್ಟು ಮತ್ತು ಅತಿಯಾದ ತೆರಿಗೆಯು ದೇಶ ಬಿಡಲು ಕಾರಣ ಎಂದು ಅವರು ತಿಳಿಸಿದ್ದಾರೆ

Join Whatsapp