ಮಂಗಳೂರಿನ ಪ್ರತಿಷ್ಠಿತ ಸರಕಾರಿ ವಿದ್ಯಾ ಸಂಸ್ಥೆಗೆ ಹರಿದ ಧ್ವಜ ಕಳುಹಿಸಿದ ಜಿಲ್ಲಾಡಳಿತ !

Prasthutha|

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸರಕಾರಿ ವಿದ್ಯಾ ಸಂಸ್ಥೆಯೊಂದಕ್ಕೆ ಸರಕಾರ, ಹರಿದ ರಾಷ್ಟ್ರಧ್ವಜವನ್ನು ಕಳುಹಿಸಲಾಗಿದ್ದು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಚೀನಾದಲ್ಲಿ ತಯಾರಾದ ಪಾಲಿಸ್ಟರ್ ಧ್ವಜ ಇದಾಗಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.

 ಸರ್ಕಾರಿ ವಿದ್ಯಾ ಸಂಸ್ಥೆಗೆ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಇದನ್ನು ಕಳುಹಿಸಲಾಗಿದೆ.

- Advertisement -

ಈ ಧ್ವಜದ ಒಂದು ಭಾಗ ಹರಿದುಹೋಗಿದ್ದು, ಇದನ್ನು ನಾವು ಹಾರಿಸುವುದಾದರೂ ಹೇಗೆ? ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಪ್ರಶ್ನಿಸಿದ್ದಾರೆ.

ಪ್ರಚಾರಕ್ಕಾಗಿ ಸರ್ಕಾರ ರಾಷ್ಟ್ರಧ್ವಜದ ಗೌರವ ಹರಾಜಿಗಿಟ್ಟಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಈ ಧ್ವಜದಲ್ಲಿ ಅಶೋಕ ಚಕ್ರ ಒಂದು ಬದಿಗೆ ಸರಿದಿದ್ದು, ಇದು ಧ್ವಜ ಸಂಹಿತೆಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ.

Join Whatsapp