ಕೊಡಗು: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Prasthutha|

ಮಡಿಕೇರಿ: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ  ಕುಡ್ಲೂರು ಚೆಟ್ಟಳ್ಳಿಯ ಮಲಕೋಡುವಿನಲ್ಲಿ ನಡೆದಿದೆ.

- Advertisement -

ಕುಡ್ಲೂರು ಚೆಟ್ಟಳ್ಳಿ ಮಲಕೋಡ್ ನಿವಾಸಿ ಮುಹಮ್ಮದ್ (65) ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ.

ಎಂದಿನಂತೆ ಇಂದು ಬೆಳಗ್ಗೆ ಕೆಲಸಕ್ಕೆ ತೆರಳುವಾಗ ಕಂಡಕರೆ ಸಮೀಪದಲ್ಲಿ ಹಠಾತ್ತನೆ ಪ್ರತ್ಯಕ್ಷಗೊಂಡ ಕಾಡಾನೆಯೊಂದು ಮುಹಮ್ಮದ್ ಅವರ ಮೇಲೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

- Advertisement -

ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಮೈಸೂರಿಗೆ ರವಾನಿಸುತ್ತಿರುವ ದಾರಿ‌ ಮಧ್ಯೆಯಲ್ಲಿ ಮೃತಪಟ್ಟಿದ್ದಾರೆ.

Join Whatsapp