ಮಂಗಳೂರು ದಸರಾ: ದೈವ ಕೋಲಗಳ ಸ್ತಬ್ಧಚಿತ್ರಕ್ಕೆ ಅವಕಾಶ ಇಲ್ಲ

Prasthutha|

ಮಂಗಳೂರು: ಮರೆವಣಿಗಳಲ್ಲಿ ದೈವದ ಕೋಲ ದೃಶ್ಯರೂಪಕ ಟ್ಯಾಬ್ಲೋಗಳನ್ನು ಬಳಸದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಿತಿಯು ತಿಳಿಸಿದೆ.

- Advertisement -


ಅನೇಕ ಸಂಘಟನೆಗಳ ವಿರೋಧದ ಹಿನ್ನಲೆಯಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಮಿತಿಯು ಮಂಗಳೂರು ದಸರಾದ ಮೆರವಣಿಗಳಲ್ಲಿ ತುಳುನಾಡಿನ ದೈವಗಳ ದೃಶ್ಯರೂಪಕ ಟ್ಯಾಬ್ಲೋಗಳನ್ನು ಪ್ರದರ್ಶಿಸಿದಂತೆ ತಿರ್ಮಾನಿಸಿದೆ.


9 ದಿನಗಳ ನವರಾತ್ರಿ ಉತ್ಸವ ಅಕ್ಟೋಬರ್ 15ರಿಂದ ಆರಂಭವಾಗಲಿದ್ದು, ಅಕ್ಟೋಬರ್ 24ಕ್ಕೆ ದಸರಾಕ್ಕೆ ತೆರೆಬೀಳಲಿದೆ. ಈ ದಿನದಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಬೇರೆ ಬೇರೆ ಸಂಘಟನೆಗಳ ಟ್ಯಾಬ್ಲೋಗಳ ಪ್ರದರ್ಶನಗೊಳ್ಳಲಿದೆ.

ಇನ್ನು ದಕ್ಷಿಣ ಕನ್ನಡದ ಅನೇಕ ಕಡೆ ದೈವದ ಕೋಲದ ರೂಪಕಗಳು ಪ್ರದರ್ಶನಗೊಳ್ಳುತ್ತಿದೆ. ಇನ್ನು ಮುಂದೆ ಇದು ನಡೆಬಾರದು ಹಾಗೂ ಈ ಬಾರಿ ದಸರಾದಲ್ಲೂ ಇದಕ್ಕೆ ಅವಕಾಶ ನೀಡಬಾರದು ಎಂದು ದೂರು ಬಂದಿದೆ ಎಂದು ದೇವಸ್ಥಾನ ಸಮಿತಿ ಕೋಶಾಧಿಕಾರಿ ಆರ್.ಪದ್ಮರಾಜ್ ತಿಳಿಸಿದ್ದಾರೆ.