ಫೆಲೆಸ್ತೀನ್ ಬೆಂಬಲಿಸಿ ವಾಟ್ಸ್ ಆ್ಯಪ್ ಸ್ಟೇಟಸ್: ಯುವಕನ ಬಂಧನ

Prasthutha|

ಹೊಸಪೇಟೆ: ಫೆಲೆಸ್ತೀನ್ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದ ಹೊಸಪೇಟೆಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಅಲ್ಪಸಂಖ್ಯಾತ ಇಲಾಖೆ ಕಚೇರಿಯ ಅಟೆಂಡರ್ ಆಲಂ ಭಾಷಾ (20) ಬಂಧಿತ ಯುವಕ ಎಂದು ಗರುತಿಸಲಾಗಿದೆ.


ಯುವಕ ತನ್ನ ವಾಟ್ಸಾಪ್ ನಲ್ಲಿ ಫೆಲೆಸ್ತೀನ್ ಪರವಾಗಿ ಸ್ಟೇಟಸ್ ಹಾಕಿಕೊಂಡಿದ್ದ ಹಾಗೂ ಮೊಬೈಲ್ ನಲ್ಲಿ ನಾನು ಪ್ಯಾಲೆಸ್ತೀನ್ ಪರವಾಗಿದ್ದೇನೆ ಎಂಬ ವೀಡಿಯೊ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಆರೋಪಿಯ ವಿರುದ್ಧ ಸ್ವಯಂ ಪ್ರೇರಣೆಯಿಂದ ಸಿಆರ್ ಪಿಸಿ 108–151 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp