ವೀಳ್ಯದೆಲೆ: ಇದು ಹಲವು ಔಷಧೀಯ ನೆಲೆ!

Prasthutha|

ಜನರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯವೇ ಭಾಗ್ಯ ಎಂದು ಹೇಳುತ್ತಾರೆ. ಆ ಭಾಗ್ಯ ಕಳಕೊಳ್ಳುತ್ತಿರುವವರೇ ಹೆಚ್ಚು. ಬದಲಾಗುತ್ತಿರುವ ಜೀವನಶೈಲಿಯಿಂದ ಮನುಷ್ಯನ ಜೀವನದಲ್ಲಿ ಅನೇಕ ಬದಲಾವಣೆಗಳು ಬರುತ್ತಿದ್ದು, ಎಂದೂ ಕೇಳಿರದ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳೂ ಕೇಳಿ ಬರುತ್ತವೆ.

- Advertisement -

ಇತ್ತೀಚಿನ ದಿನಗಳಲ್ಲಿ ಅನೇಕರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಯೂರಿಕ್ ಆಸಿಡ್ ಕೂಡ ಒಂದು. ಅನೇಕ ಕಾರಣಗಳಿಂದ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುತ್ತದೆ. ಈ ಒಂದು ಸಮಸ್ಯೆಯಿಂದಾಗಿ ಇನ್ನೂ ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವು ಅಧಿಕವಾಗಿದ್ದರೆ ಕೀಲು ನೋವು, ಮೂತ್ರಪಿಂಡದ ಕಲ್ಲುಗಳು ಮತ್ತು ಗೌಟ್‌ನಂತಹ ಸಮಸ್ಯೆಗಳು ಉದ್ಭವಿಸುತ್ತವೆ.

ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದ ನಂತರ ಇದನ್ನು ಕಡಿಮೆ ಮಾಡುವುದು ತುಂಬಾ ಕಷ್ಟ. ಇವುಗಳನ್ನು ಕಡಿಮೆ ಮಾಡದ್ದರೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಿಮಗೆ ಗೊತ್ತಿರಲಿ, ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸುವ ಗುಣಲಕ್ಷಣಗಳು ವೀಳ್ಯದೆಲೆಯಲ್ಲಿ ಸಮೃದ್ಧವಾಗಿವೆ!

- Advertisement -

ವೀಳ್ಯದೆಲೆಯಿಂದ ಯೂರಿಕ್ ಆಮ್ಲವನ್ನ ಹೇಗೆ ನಿಯಂತ್ರಿಸಬಹುದು ಎಂದು ತಿಳಿಯೋಣ. ವೀಳ್ಯದೆಲೆಯನ್ನ ನಿಯಮಿತವಾಗಿ ಅಡಿಕೆ ಜೊತೆಯೋ , ಬರೀ ಎಲೆಯನ್ನು ಮಾತ್ರವೋ ಅಗಿದು ಸೇವಿಸಿದರೆ ಯೂರಿಕ್ ಆಮ್ಲದ ಸಮಸ್ಯೆಯನ್ನ ನಿಯಂತ್ರಣಕ್ಕೆ ತರಬಹುದು.

ಇದಲ್ಲದೆ, ರಾತ್ರಿ ಮಲಗುವ ಮುನ್ನ ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ವೀಳ್ಯದೆಲೆಯನ್ನು ತುಂಡುಗಳಾಗಿ ಕತ್ತರಿಸಿ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿಯುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು.

ಒಂದು ಸಣ್ಣ ಬಟ್ಟಲಿನಲ್ಲಿ ವೀಳ್ಯದೆಲೆಯನ್ನು ಸೇರಿಸಿ, ನಂತರ ನೀರು ಸೇರಿಸಿ ಐದು ನಿಮಿಷಗಳ ಕಾಲ ಕುದಿಸಿ ಉಗುರು ಬೆಚ್ಚಗಿರುವಾಗ ಈ ನೀರನ್ನು ಕುಡಿಯುವುದರಿಂದಲೂ ಯೂರಿಕ್ ಆಮ್ಲದ ಮಟ್ಟ ಕಡಿಮೆಯಾಗುತ್ತದೆ. ಹೀಗೆ ಮಾಡೋದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಣಕ್ಕೆ ತರಬಹುದಾಗಿದೆ.

ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ಕ್ಯಾಲ್ಸಿಯಂ ಮತ್ತು ಕ್ಯಾರೋಟಿನ್ ಸಮೃದ್ಧವಾಗಿದೆ.

ವೀಳ್ಯದೆಲೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.
ವಿವಿಧ ಚರ್ಮದ ಸಮಸ್ಯೆಗಳಿಗೆ ನೀವು ಅರಿಶಿನದೊಂದಿಗೆ ಬೆರೆಸಿದ ವೀಳ್ಯದೆಲೆಯ ಮಿಶ್ರಣವನ್ನು ಬಳಸಬಹುದು. ವೀಳ್ಯದೆಲೆಯ ಮಿಶ್ರಣವನ್ನು ಹಣೆಯ ಮೇಲೆ ಹಚ್ಚುವುದರಿಂದ ತೀವ್ರ ತಲೆ ನೋವಿನಲ್ಲೂ ತಾತ್ಕಾಲಿಕ ಉಪಶಮನ ದೊರೆಯುತ್ತದೆ.

ಸಣ್ಣ ಗಾಯಗಳಿಗೆ ಬ್ಯಾಂಡೇಜ್ ಬದಲಿಗೆ ಕೈಗೆಟುಕುವ ವೀಳ್ಯದೆಲೆಯು ತುಂಬಾ ಉಪಯುಕ್ತವಾಗಿದೆ. ಇದು ನೋವು ಮತ್ತು ಗಾಯ ಎರಡನ್ನೂ ನಿವಾರಿಸುತ್ತದೆ.

Join Whatsapp