ಮಂಗಳೂರು ವಿಮಾನ ನಿಲ್ದಾಣ: ವರ್ಷಾಂತ್ಯಕ್ಕೆ ದಾಖಲೆಯ ಪ್ರಯಾಣ

Prasthutha|

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2023ರ ಡಿಸೆಂಬರ್ ತಿಂಗಳಲ್ಲಿ 2.03 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. ಡಿಸೆಂಬರ್ 31ರಂದು ಒಂದೇ ದಿನ 7,548 ಜನರನ್ನು ನಿಲ್ದಾಣ ನಿರ್ವಹಣೆ ಮಾಡಿದೆ.

- Advertisement -

ವಿಮಾನ ನಿಲ್ದಾಣವು ಡಿಸೆಂಬರ್ ನಲ್ಲಿ 12 ದಿನ 7,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದೆ. ಇದೀಗ ಇದಕ್ಕೂ ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಬಹುಪಾಲು ಡಿಸೆಂಬರ್ 9-10, 16-17, 23-25 ಮತ್ತು 30-31ರ ವಾರಾಂತ್ಯದಲ್ಲಿ ದಾಖಲಾಗಿದೆ. ಕ್ರಿಸ್ ಮಸ್ ಗೆ ಮುಂಚಿನ ಮೂರು ದಿನಗಳಲ್ಲಿ ಕ್ರಮವಾಗಿ 7089, 7220 ಮತ್ತು 7034 ಪ್ರಯಾಣಿಕರನ್ನು ನಿರ್ವಹಿಸಲಾಗಿದೆ. 2023ರ ನವೆಂಬರ್ನಲ್ಲಿ 1.78 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ.

Join Whatsapp