ರನ್ ವೇಯಲ್ಲಿ ವಿಮಾನ ಬೆಂಕಿಗಾಹುತಿ: 400 ಪ್ರಯಾಣಿಕರು ಪಾರು

Prasthutha|

ಟೋಕಿಯೊ: ವಿಮಾನವೊಂದರಲ್ಲಿ ಬೆಂಕಿಗೆ ಕಾಣಿಸಿಕೊಂಡ ಘಟನೆ ಜಪಾನ್ ಟೋಕಿಯೊದಲ್ಲಿ ನಡೆದಿದೆ.

- Advertisement -

ವಿಮಾನದಲ್ಲಿದ್ದ ಕನಿಷ್ಠ 400 ಪ್ರಯಾಣಿಕರು ಮತ್ತು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ವಿಮಾನದ ಕಿಟಿಕಿಗಳಿಂದ ಬೆಂಕಿಯ ಜ್ವಾಲೆಗಳು ಹೊರ ಬರುತ್ತಿರುವುದು ಕಾಣಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ರನ್ ವೇಯಲ್ಲಿ ಟ್ಯಾಕ್ಸಿ ಮಾಡುವಾಗ ವಿಮಾನದ ಬದಿಯಿಂದ ಬೆಂಕಿ ಮತ್ತು ದೊಟ್ಟ ಹೊಗೆ ಆವರಿಸಿದೆ. ನಂತರ ರೆಕ್ಕೆಯ ಸುತ್ತಲು ಬೆಂಕಿ ಹೊತ್ತಿಕೊಂಡಿದೆ.

Join Whatsapp