ಅಧಿಕಾರದಲ್ಲಿರುವವರು ಜಾತ್ಯತೀತತೆಯನ್ನು ನಿಕೃಷ್ಟವಾಗಿ ನೋಡುತ್ತಿದ್ದಾರೆ: ಸೋನಿಯಾ ಗಾಂಧಿ

Prasthutha|

ತಿರುವನಂತಪುರ: ಅಧಿಕಾರದಲ್ಲಿರುವವರು ಜಾತ್ಯತೀತತೆಯನ್ನು ನಿಕೃಷ್ಟವಾಗಿ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

- Advertisement -

ಜಾತ್ಯತೀತತೆಯನ್ನು ನಿಕೃಷ್ಟವಾಗಿ ನೋಡುವ ಪರಿಣಾಮವಾಗಿ ಸಮಾಜದಲ್ಲಿ ಧ್ರುವೀಕರಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬದ್ಧರಾಗಿದ್ದೇವೆ ಎಂದು ಹೇಳುವವರು ಅದೇ ಸಮಯದಲ್ಲಿ ಅದಕ್ಕಿರುವ ರಕ್ಷಣಾತ್ಮಕ ಅಂಶಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಅದರ ಪರಿಣಾಮ, ನಮ್ಮ ರಾಷ್ಟ್ರವನ್ನು ಸಾಮರಸ್ಯದತ್ತ ಕೊಂಡೊಯ್ಯುವ ಮಾರ್ಗಗಳು ಹಾನಿಗೊಳಗಾಗುತ್ತಿವೆ. ಅದರ ಫಲಿತಾಂಶಗಳನ್ನು ಈಗಾಗಲೇ ನೋಡುತ್ತಿದ್ದೀರಿ. ಸಮಾಜದಲ್ಲಿ ಧ್ರುವೀಕರಣವನ್ನು ಹೆಚ್ಚಿಸಿದೆ’ಎಂದು ಸೋನಿಯಾ ಮನೋರಮಾ ಇಯರ್ ಬುಕ್ 2024ರ ಲೇಖನದಲ್ಲಿ ಬರೆದಿದ್ದಾರೆ.

Join Whatsapp