ಮಂಗಳೂರು | ಮೊಯ್ದಿನ್ ಬಾವಾ ಮಾಡಿರುವ ಅಭಿವೃದ್ಧಿಗೆ ಈ ಬಾರಿ ಮತದಾರರು ಕೈ ಹಿಡಿಯಲಿದ್ದಾರೆ: ದೇವೇಗೌಡ

Prasthutha|

ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಉತ್ತಮ ಕೆಲಸ ಮಾಡಿದ್ದು, ಈ ಬಾರಿ ಮತದಾರರು ಅವರ ಕೈ ಹಿಡಿಯಲಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

- Advertisement -


ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಲಾಯಿತು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಹಿಂದಿನ ಶಾಸಕ ಮೊಯಿದೀನ್ ಬಾವಾ ಅವರ ಅವಧಿಯಲ್ಲಿ. ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರು ಮೋಸದಿಂದ ಟಿಕೆಟ್ ಸಿಗುವುದನ್ನು ತಪ್ಪಿಸಿದರು. ನಾವು ಅವರಲ್ಲಿ ಧೈರ್ಯ ತುಂಬಿ ಜೆಡಿಎಸ್ ನಿಂದ ಟಿಕೆಟ್ ನೀಡಿದ್ದೇವೆ ಎಂದು ಹೇಳಿದ್ದಾರೆ.


ಬಾವಾ ಅವರು ಮೂರನೇ ನಂಬರ್ ನಲ್ಲಿ ಇದ್ದಾರೆ. ಭತ್ತದ ತೆನೆ ಹೊತ್ತ ಅನ್ನಪೂರ್ಣೇಶ್ವರಿಯ ಚಿಹ್ನೆ ಅವರದ್ದಾಗಿದೆ. ಮೇ 10ರಂದು ಸಂಜೆ 5 ಗಂಟೆಯ ವರೆಗೆ ಕಾಲಾವಕಾಶ ಇದೆ, ನಾನು ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ. ಅವರಿಗೆ ಮತ ಕೊಟ್ಟು ಹರಸಿ. ಜನರಿಗೆ ಬಾವಾ ಮೇಲೆ ವಿಶ್ವಾಸವಿದ್ದು ಅವರು ಮತ ಕೊಟ್ಟು ಗೆಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.