ನಾಳೆ ಇನಾಯತ್ ಅಲಿ ಪರ ಸುರತ್ಕಲ್‌ನಲ್ಲಿ ರಾಜಸ್ಥಾನ ಸಿಎಂ ರೋಡ್ ಶೋ

Prasthutha|

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಪರ ನಾಳೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅಖಾಡಕ್ಕಿಳಿಯಲಿದ್ದಾರೆ.

- Advertisement -


ನಾಳೆ(ಮಂಗಳವಾರ) ಮಧ್ಯಾಹ್ನ 3:30ಕ್ಕೆ ಸುರತ್ಕಲ್ ಬಳಿಯ ಕಾನ ಕ್ರಾಸ್ ನಿಂದ ಸುರತ್ಕಲ್ ಜಂಕ್ಷನ್ ವಿದ್ಯಾದಾಯಿನಿ ಶಾಲೆಯವರೆಗೆ ರೋಡ್ ಶೋ ನಡೆಯಲಿದ್ದು, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಇನಾಯತ್ ಅಲಿ ಪರವಾಗಿ ರೋಡ್ ಶೋ ನಡೆಸಿ ಸಾರ್ವಜನಿಕರಲ್ಲಿ ಮತ ಯಾಚಿಸಲಿದ್ದಾರೆ.

ಇನಾಯತ್ ಅಲಿ, ಸುರತ್ಕಲ್, ಗುರುಪುರ ಬ್ಲಾಕ್ ನ ಪ್ರಮುಖರು, ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಕಚೇರಿ ಪ್ರಕಟಣೆ ತಿಳಿಸಿದೆ.