ಮಂಗಳೂರು: ಡಿ.30, 31ರಂದು ಹಲವೆಡೆ ವಿದ್ಯುತ್ ವ್ಯತ್ಯಯ

Prasthutha|


ಮಂಗಳೂರು: ನಗರದ 110/33/11ಕೆವಿ ಬೈಕಂಪಾಡಿ ಉಪಕೇಂದ್ರದಿಂದ ಹೊರಡುವ 33ಕೆವಿ ಸುರತ್ಕಲ್ ಇಂಡಸ್ಟ್ರೀಯಲ್ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.

- Advertisement -


ಆದ ಕಾರಣ ಡಿ.30ರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಸುರತ್ಕಲ್, ಕಾನ, ತಡಂಬೈಲ್, ಕಾಟಿಪಳ್ಳ, ಕುತ್ತೆತ್ತೂರು, ಚೇಳಾರು, ಮುಕ್ಕ, ಸಸಿಹಿತ್ಲು, ಬಿ.ಎ.ಎಸ್.ಎಫ್, ಎಚ್.ಪಿ.ಸಿ.ಎಲ್, ಸ್ಟೀಲ್ ಬ್ಯಾರೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.


ಡಿಸೆಂಬರ್ 31: ನಗರದ 33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ವಿವೇಕ್ ಮೋಟಾರ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

- Advertisement -


ಆದ ಕಾರಣ ಡಿ.31 ನೆಹರೂ ಮೈದಾನ 3 ಹಾಗೂ 4ನೇ ಕ್ರಾಸ್, ಬೀಬಿ ಅಲಾಬಿ ರಸ್ತೆ, ರಾವ್ ಅಂಡ್ ರಾವ್ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Join Whatsapp