ಮಂಗಳೂರು: ಐಸಿಸ್ ನಂಟು ಆರೋಪಿಸಿ ಎಂಟು ಮಂದಿ ವಿರುದ್ಧ NIA ಚಾರ್ಜ್ ಶೀಟ್

Prasthutha|

ನವದೆಹಲಿ : ಇತ್ತೀಚ್ಚೆಗೆ ಮಂಗಳೂರಿನ ಉಳ್ಳಾಲದಿಂದ ಮಾಜಿ ಕಾಂಗ್ರೆಸ್ ಶಾಸಕ ದಿವಂಗತ ಬಿ.ಎಮ್ ಇದಿನಬ್ಬ ಅವರ ಕುಟುಂಬದ ಸದಸ್ಯರನ್ನು ಬಂಧಿಸಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಗೆ ಭಾರತದಿಂದ ನೇಮಕಾತಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಎಂ. ಇದಿನಬ್ಬ ಅವರ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಮತ್ತು ಅಮ್ಮರ್ ಅಬ್ದುಲ್ ರಹಿಮಾನ್ ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

- Advertisement -

ಪ್ರಕರಣದಲ್ಲಿ ಬಂಧಿತರಾಗಿದ್ದ , ದೀಪ್ತಿ ಅಲಿಯಾಸ್ ಮರಿಯಂ, ಮೊಹಮ್ಮದ್ ವಕಾರ್ ಲೋನ್ ಅಲಿಯಾಸ್ ವಿಲ್ಸನ್ ಕಾಶ್ಮೀರಿ, ಭಟ್ಕಳದ ಮಿಝಾ ಸಿದ್ದೀಕ್, ಶಿಫಾ ಹ್ಯಾರಿಸ್ ಅಲಿಯಾಸ್ ಆಯೆಷಾ , ಒಬೈದ್ ಹಮೀದ್ ಮಟ್ಟ, ಬೆಂಗಳೂರಿನಲ್ಲಿ ಬಂಧಿತ ಮಾದೇಶ್ ಶಂಕರ್ ಅಲಿಯಾಸ್ ಅಬ್ದುಲ್ಲಾ, ಉಳ್ಳಾಲದ ಮಾಜಿ ಶಾಸಕ ದಿ. ಎಂ ಇದಿನಬ್ಬ ಅವರ ಮೊಮ್ಮಗ ಅಮರ್ ಅಬ್ದುಲ್ ರಹಿಮಾನ್ ಮತ್ತು ಮುಝಾಮಿಲ್ ಹಸನ್ ಭಟ್ ಇವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಮರ್ಲಾ ಅವರನ್ನು ಬಂಧಿಸಲಾಗಿತ್ತು.

“ಇಂದು ಚಾರ್ಜ್‌ಶೀಟ್ ಮಾಡಿರುವ ಎಲ್ಲಾ ಎಂಟು ಆರೋಪಿಗಳು ಐಸಿಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಉಗ್ರಗಾಮಿ ಸಂಘಟನೆಯೊಂದಿಗೆ ನಂಟು, ನೇಮಕಾತಿ, ಭಯೋತ್ಪಾದನಾ ನಿಧಿಗಳನ್ನು ಸಂಘಟಿಸುವುದು ಮತ್ತುಐಸಿಎಸ್ ವಿಚಾರಧಾರೆಗಳ ಬಗ್ಗೆ ಒಲವು ಉಳ್ಳ ಮೂಲಭೂತವಾದಿ ಯುವಕರನ್ನು ಪತ್ತೆ ಮಾಡಿ, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಐಸಿಸ್ ಸೇರಲು ಪ್ರಚೋದಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎನ್ ಐ ಎ ಹೇಳಿದೆ. ಮಾರ್ಚ್ 2021 ರಲ್ಲಿ ಎನ್ಐಎ ಪ್ರಕರಣವನ್ನು ದಾಖಲಿಸಿತ್ತು.

Join Whatsapp