ಮಂಗಳೂರು | ಬಂಧಿಸಲು ಹೋದ ಪೊಲೀಸರಿಗೆ ಹಲ್ಲೆ ಮಾಡಿದ ಆರೋಪ: ಪತಿ, ಪತ್ನಿ ಬಂಧನ

Prasthutha|

ಮಂಗಳೂರು: ಅಪರಾಧ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಬಜ್ಪೆ ಅದ್ಯಪಾಡಿ ನಿವಾಸಿ ಮನ್ಸೂರ್ ಹಾಗೂ ಆತನ ಪತ್ನಿ ಅಸ್ಮಾ ಬಂಧಿತರು.

ಅಪರಾಧ ಪ್ರಕರಣ ಸಂಬಂಧ ಮನ್ಸೂರ್ ವಿರುದ್ಧ ನ್ಯಾಯಾಲಯವು ಬಂಧನದ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮೂಡಬಿದ್ರೆ ಹಾಗೂ ಬಜ್ಪೆ ಠಾಣಾ ಪೊಲೀಸರು ಬಂಧನ ಮಾಡಲು ಆರೋಪಿಯ ಮನೆಗೆ ತೆರಳಿದ್ದರು.
ಈ ವೇಳೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಲ್ಲದೆ ಆತನ ಹೆಂಡತಿ ಮತ್ತು ಮನೆಯ ಇತರ ಸದಸ್ಯರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.

- Advertisement -

ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಆತನ ಪತ್ನಿ ಅಸ್ಮಾಳನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp