ಶಿವಮೊಗ್ಗ: ಪೊಲೀಸರ ಗಾಂಜಾ ಬೇಟೆ; ಆರೋಪಿಗಳು ಅಂಧರ್

Prasthutha|

ತೀರ್ಥಹಳ್ಳಿ: ನಗರದಲ್ಲಿ ಮತ್ತೆ ಪೊಲೀಸರು ಗಾಂಜಾ ಗಿರಾಕಿಗಳ ಪತ್ತೆಗೆ ಬಲೆಬೀಸಿದ್ದು, ಗಾಂಜಾ ಸೇವಿಸುವವರನ್ನೇ ಟಾರ್ಗೆಟ್ ಮಾಡಿ ವಶಕ್ಕೆ ಪಡೆದು ಮಾಹಿತಿ ಕಲೆಹಾಕುತ್ತಿದ್ದಾರೆ.

- Advertisement -


ಇದೀಗ ಚಿಟ್ಟೆ ಯಾನೆ ನಿತಿನ್ ಕುಮಾರ್, ಸಕ್ಲೇನ್, ಆರ್ ಎಂ ಎಲ್ ನಗರದ ಸಮೀರ್, ತೀರ್ಥಹಳ್ಳಿಯ ಸಂಜಯ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.


ಈ ಬಗ್ಗೆ ತಮಗೆ ಲಭಿಸಿರುವ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕಳೆದ ಮೂರು ದಿನಗಳ ಒಳಗೆ ಅನುಪಿನಕಟ್ಟೆ ರಸ್ತೆ ಬಳಿ ಇರುವ ತುಂಗಾ ಮೇಲ್ದಂಡೆ ಚನಲ್ ಬಳಿಯ ಸೇತುವೆ ಹತ್ತಿರ ಗಾಂಜಾ ಮಾರುತ್ತಿದ್ದ ಈ ನಾಲ್ವರನ್ನು ಬಂಧಿಸಿ, 30 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದರು.

- Advertisement -


ಇದೀಗ ಆರೋಪಿಗಳನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಗಾಂಜಾ ಮಾಫಿಯಾದ ಇನ್ನಷ್ಟು ಮಾಹಿತಿ ಪಡೆಯುತ್ತಿದ್ದಾರೆ.



Join Whatsapp