ಮಂಗಳೂರು | ಅಳಿಯನ ಅಪಹರಣ ಪ್ರಕರಣ: ಕಾಂಗ್ರೆಸ್ ನಾಯಕಿ ದಿವ್ಯಾ ಪ್ರಭಾ ಮೇಲೆ FIR

Prasthutha|

- Advertisement -

ಬೆಂಗಳೂರು: ಅಳಿಯನ ಅಪಹರಣ ಆರೋಪ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ನಾಯಕಿ‌, ಸಮಾಜಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಾ ಪ್ರಭಾ ಗೌಡ ವಿರುದ್ಧ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಅಪಹರಣ ಮಾಡಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಅಳಿಯ ನವೀನ್ ಗೌಡ ನೀಡಿದ ದೂರಿನ ಮೇರೆಗೆ ದಿವ್ಯಾಪ್ರಭಾ, ಈಕೆಯ ಪುತ್ರಿ ಸ್ಪಂದನಾ, ಪತಿ ಪರಶುರಾಮ್ ಸೇರಿ ಆರು ಜನರ ಮೇಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -

ದಿವ್ಯಾ ಪ್ರಭಾ ಪುತ್ರಿ ಸ್ಪಂದನಾ ಎಂಬಾಕೆಯನ್ನು ಮದುವೆಯಾಗಿದ್ದ ನವೀನ್ ಗೌಡ, ಇತ್ತೀಚೆಗೆ ಕೌಟುಂಬಿಕ ಕಾರಣದಿಂದ ಸ್ಪಂದನಾಯಿಂದ ದೂರವಾಗಿದ್ದ. ಆಕೆಗೆ ಬೇರೆ ಸಂಬಂಧ ಇದೆ, ಒಂದಷ್ಟು ಅಶ್ಲೀಲ ವಾಟ್ಸಾಪ್ ಸಂದೇಶ ಸಿಕ್ಕಿದ್ದರಿಂದ ದೂರವಾಗಿದ್ದ ಎನ್ನಲಾಗಿದೆ. ಇದೇ ಕಾರಣದಿಂದ ಮನೆಯಿಂದ ಅಪಹರಣ ಮಾಡಿದ್ದರು.

ನಂತರ ಜೆಪಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ‌ ಅಸ್ವಸ್ಥನೆಂದು ಬಿಂಬಿಸಲು ಪ್ರಯತ್ನಪಟ್ಟಿದ್ದಾರೆಎಂದು‌ ದೂರಿನಲ್ಲಿ ನವೀನ್ ಗೌಡ ಉಲ್ಲೇಖ ಮಾಡಿದ್ದರು. ಈ ಸಂಬಂಧ ಪುಟ್ಟೇನಹಳ್ಳಿ‌ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Join Whatsapp