ಪಿಎಸ್‌’ಐ ನೇಮಕಾತಿ ಅಕ್ರಮ: ಸಹಾಯಕ ಪ್ರಾಧ್ಯಾಪಕನ ಬಂಧನ

Prasthutha|

- Advertisement -

ಕಲಬುರಗಿ: ಪಿಎಸ್‌’ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತ) ಸಹಾಯಕ ಪ್ರಾಧ್ಯಾಪಕ ವಿಜಯಕುಮಾರ್ ಹೆಬ್ಬಾಳರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಸುಪ್ರಿಯಾ ಎಂಬುವರಿಗೆ ಬ್ಲೂಟೂತ್ ಪೂರೈಸಲು ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಸೂಚಿಸಿದ್ದ. ಅದರಂತೆ ಕಳೆದ ವರ್ಷದ ಅಕ್ಟೋಬರ್ 2ರಂದು ರಾತ್ರಿ ಸರ್ಕಾರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಆರೋಪಿಯ ಬೆಂಚಿನ ಕೆಳಗಡೆ ಬ್ಲೂಟೂತ್ ಇರಿಸಿದ್ದ. ಇದಕ್ಕಾಗಿ ಪಾಟೀಲ ಕಡೆಯಿಂದ ಹಣ ಪಡೆದಿದ್ದ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

- Advertisement -

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Join Whatsapp