ಮಂಡ್ಯ : ರೈತರಿಂದ ಪೇ ಫಾರ್ಮರ್ ಪೋಸ್ಟ್ ರ್ ಅಭಿಯಾನ

Prasthutha|

ಮಂಡ್ಯ : ಪೇ ಸಿಎಂ  ಪೋಸ್ಟರ್ ಪೋಸ್ಟರ್ ಅಭಿಯಾನದ ಬೆನ್ನಲ್ಲೆ, ರಾಜ್ಯದಲ್ಲಿ ಪೆ ಫಾರ್ಮರ್ ಅಭಿಯಾನ ತೀವ್ರಗೊಳ್ಳುತ್ತಿದೆ. ಮಂಡ್ಯದಲ್ಲಿ ರೈತರಿಂದ  ಪೇ ಫಾರ್ಮರ್ ಅಭಿಯಾನ ಶುರು ಮಾಡಲಾಗಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ  ಪೇ ಫಾರ್ಮರ್ ಪೋಸ್ಟ್ ಹಿಡಿದು ನಿಂತ ರೈತರು ಪ್ರತಿಭಟನೆ ನಡೆಸಿದ್ದಾರೆ.

- Advertisement -

ಜಿಲ್ಲೆಯ ಸಂಜಯ್ ವೃತ್ತದಲ್ಲಿ ರೈತರು ಅಭಿಯಾನ ಕೈಗೊಂಡಿದ್ದು, ಒಂದು ಟನ್ ಕಬ್ಬಿಗೆ 4500 ರೂ ನಿಗದಿ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ.  ಅಲ್ಲದೆ ತಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ,  ದಸರಾದಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಮ್ಮಿಕೊಂಡ ಅಭಿಯಾನದಲ್ಲಿ ರೈತರು, ಕಾರು, ಹೆದ್ದಾರಿಯ ಗೋಡೆ ಹಾಗೂ ಸಾರಿಗೆ ಬಸ್ ನಿಲ್ದಾಣದ ಗೋಡೆಗಳಲ್ಲಿ ,ಹೆದ್ದಾರಿಯಲ್ಲಿ KSRTC,ಐರಾವತ,ರಾಜಹಂಸ ಬಸ್ ಗಳ ತಡೆದು PAY FARMER ಪೋಸ್ಟ್ ಅಂಟಿಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮಧುಚಂದನ್, ಪ್ರಸನ್ನಗೌಡ, ಸೇರಿದಂತೆ ಹಲವರು ಭಾಗಿಯಾಗಿದ್ದರು.

Join Whatsapp