ಮಂಗಳೂರು | ಯುವಕ-ಯುವತಿ ಮೊಬೈಲ್ ನಲ್ಲಿ ಚಾಟ್: ವಿಮಾನ ಪ್ರಯಾಣ ರದ್ದುಗೊಳಿಸಿ ತೀವ್ರ ತಪಾಸಣೆ

Prasthutha|

ಮಂಗಳೂರು: ಭಾನುವಾರ ಮಧ್ಯಾಹ್ನ ಯುವಕ, ಯುವತಿ ಮೊಬೈಲ್ ನಲ್ಲಿ ಚಾಟ್ ಮಾಡಿದಕ್ಕೆ ವಿಮಾನವೊಂದರ ಸಂಚಾರವನ್ನು ಮೊಟಕುಗೊಳಿಸಿ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಲಾದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.


ಯುವಕ ಯುವತಿ ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದುದನ್ನು ಗಮನಿಸಿದ ಓರ್ವ ಪ್ರಯಾಣಿಕ ಸಂಶಯಗೊಂಡು ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ಮೊಟಕುಗೊಳಿಸಿ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -


ಯುವತಿ ಬೆಂಗಳೂರಿಗೆ ಹೋಗಲು ಬೇರೆ ವಿಮಾನಕ್ಕೆ ಕಾಯುತ್ತಿದ್ದಳು. ಯುವಕ ಮುಂಬೈ ವಿಮಾನದಲ್ಲಿ ಹೊರಡಲು ಸಿದ್ದನಾಗಿದ್ದ. ಈ ವೇಳೆ ಯುವಕ ಯುವತಿಯರಿಬ್ಬರು ಗೆಳೆಯರಾಗಿದ್ದು ತಮಾಷೆಗಾಗಿ ಭದ್ರತೆ ಬಗ್ಗೆ ಮಾತನಾಡಿರುವುದಾಗಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -