ಯುಎಇ | ದುಬೈ ಲಕ್ಕಿ ಡ್ರಾದಲ್ಲಿ 8 ಕೋಟಿ ರೂ.ಗೆದ್ದ ಅಮೆರಿಕ ಪ್ರಜೆ; ಇನ್ನಿಬ್ಬರಿಗೆ ಐಷಾರಾಮಿ ಕಾರು ಬಹುಮಾನ

Prasthutha|

ದುಬೈ: ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದ ದುಬೈ ಡ್ಯೂಟಿ ಫ್ರೀ ಮಿಲಿಯನೇರ್ ಲಕ್ಕಿ ಡ್ರಾದಲ್ಲಿ ಅಮೆರಿಕ ಪ್ರಜೆಯೊಬ್ಬರು 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂ. ಗೆದ್ದಿದ್ದಾರೆ ಎಂದು ಘೋಷಿಸಲಾಯಿತು. ಇನ್ನಿಬ್ಬರಿಗೆ ಐಷಾರಾಮಿ ಕಾರುಗಳನ್ನು ಬಹುಮಾನವಾಗಿ ನೀಡಲಾಗಿದೆ.

- Advertisement -

ನ್ಯೂಯಾರ್ಕ್’ನಲ್ಲಿ ವಾಸಿಸುತ್ತಿರುವ ಅಮೆರಿಕನ್ ಪ್ರಜೆಯಾದ ಫಕ್ರೆಲ್ಡಿನ್ ಎಲ್ಟೆಗಾನೆ ಅಲಿ ಸಬೆಲ್ ಜುಲೈ 22 ರಂದು ಖರೀದಿಸಿದ ಟಿಕೆಟ್ ಸಂಖ್ಯೆ 0680 ನೊಂದಿಗೆ ಮಿಲೇನಿಯಮ್ ಮಿಲಿಯನೇರ್ ಸರಣಿ 397 ರಲ್ಲಿ $1 ಮಿಲಿಯನ್ ( ಭಾರತೀಯ 8 ಕೋಟಿ ರೂ.) ವಿಜೇತರಾಗಿದ್ದಾರೆ ಎಂದು ಹೇಳಲಾಗಿದೆ.



Join Whatsapp