ಶಾಲಾ ವಿದ್ಯಾರ್ಥಿಗಳ ಮೆರವಣಿಗೆಯಲ್ಲಿ ಸಾವರ್ಕರ್ ವೇಷ: ಕ್ರಮಕ್ಕೆ ಆಗ್ರಹಿಸಿ ಶಾಲೆಗೆ ಮುತ್ತಿಗೆ

Prasthutha|

ಮಲಪ್ಪುರಂ/ ಕೇರಳ: ಶಾಲಾ ವಿದ್ಯಾರ್ಥಿಗಳ ಸ್ವಾತಂತ್ರ್ಯ ದಿನದ ಮೆರವಣಿಗೆಯಲ್ಲಿ ವಿದ್ಯಾರ್ಥಿಯೋರ್ವ ಸಾವರ್ಕರ್‌ನಂತೆ ವೇಷ ಧರಿಸಿದ್ದು, ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಸ್ವಾತಂತ್ರ್ಯ ಹೋರಾಟಗಾರ ವೇಷಗಳ ಮೆರವಣಿಗೆಯ ಪೈಕಿ ಸಾವರ್ಕರ್ ಅವರಂತೆ ವಿದ್ಯಾರ್ಥಿಯೊಬ್ಬ ವೇಷ ಧರಿಸಿದ್ದು, ಈ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಮತ್ತು ಯೂತ್ ಲೀಗ್ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಕೀಯೂಂಪರಂಬದ ಸರಕಾರಿ ವೃತ್ತಿಪರ ಉನ್ನತ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಾಧ್ಯಮಗಳಲ್ಲಿ ಪ್ರಸಾರವಾದ ಸಣ್ಣ ತುಣುಕೊಂದು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುತ್ತಿಗೆ ಹಾಕಲಾಗಿದೆ.

- Advertisement -

ವೈರಲ್ ಆದ ವೀಡಿಯೋ ಮೆರವಣಿಗೆಗೆ ಮೊದಲು ತೆಗೆದದ್ದಾಗಿದ್ದು, ವಿದ್ಯಾರ್ಥಿಗೆ ತೂಗು ಹಾಕಿದ್ದ ‘ಸಾವರ್ಕರ್’ ಹೆಸರು ವಿವಾದವಾಗಬಹುದೆಂದು ಅಧ್ಯಾಪಕರು ಅದನ್ನು ತೆಗೆದು ಮೆರವಣಿಗೆ ನಡೆಸಿದ್ದರು ಎಂದು ಪ್ರಾದೇಶಿಕ ಮಾಧ್ಯಮಗಳು ವರದಿ ಮಾಡಿದೆ.

ಆದರೆ ವಿವಾದದ ಕುರಿತು ಶಾಲಾಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.



Join Whatsapp