ಸಂಸದ ಅಸದುದ್ದೀನ್ ಉವೈಸಿ ಕಾರಿನ ಮೇಲೆ ಗುಂಡಿನ ದಾಳಿ: ಬಂಧಿತ ಆರೋಪಿ ಬಿಜೆಪಿ ಕಾರ್ಯಕರ್ತ

Prasthutha|

ಲಕ್ನೋ: AIMIM ಮುಖಂಡ, ಸಂಸದ ಅಸದುದ್ದೀನ್ ಉವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿ ಬಿಜೆಪಿ ಕಾರ್ಯಕರ್ತ ಸಚಿನ್ ಪಂಡಿತ್ ಎಂದು ತಿಳಿದು ಬಂದಿದೆ. ಆತ 2009 ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಆತನ ಫೇಸ್ ಬುಕ್ ಖಾತೆಯಿಂದ ಬಹಿರಂಗವಾಗಿದೆ.

- Advertisement -

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಕೇಂದ್ರ ಕಾನೂನು ರಾಜ್ಯ ಖಾತೆ ಸಚಿವ, ನ್ಯಾಯಮೂರ್ತಿ ಸತ್ಯಪಾಲ್ ಸಿಂಗ್ ಮತ್ತು ಸಂಸದ ಮಹೇಶ್ ಶರ್ಮಾ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಇರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಮಧ್ಯೆ ಸಚಿನ್ ಪಂಡಿತ್ ಬಿಜೆಪಿ ಸದಸ್ಯದ ತನ್ನ ಗುರುತಿನ ಚೀಟಿಯ ಪ್ರತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗುತ್ತಿವೆ. ಫೇಸ್ ಬುಕ್ ನಲ್ಲಿ ಸಚಿನ್ ಹೆಸರನ್ನು ‘ದೇಶಭಕ್ತ ಹಿಂದೂ ಸಚಿನ್ ಎಂದು ನಮೂಧಿಸಲಾಗಿದೆ.

- Advertisement -

ಘಟನಾ ಸ್ಥಳದಿಂದ ಆರೋಪಿ ಸಚಿನ್ ನನ್ನು ಬಂಧಿಸಲಾಗಿದ್ದು, ಆತನಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪರಾರಿಯಾದ ಮತ್ತೋರ್ವ ಆರೋಪಿಯಾದ ಶುಭಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp