ಮಂಗಳೂರು: ಸ್ನೇಹಿತರ ಜೊತೆ ಸ್ನಾನಕ್ಕೆಂದು ಕೊಳಕ್ಕೆ ಇಳಿದಿದ್ದ ವ್ಯಕ್ತಿ ಮೃತ್ಯು

Prasthutha|

- Advertisement -

ಮಂಗಳೂರು: ಸ್ನೇಹಿತರ ಜೊತೆ ಸ್ನಾನಕ್ಕೆಂದು ಕೊಳಕ್ಕೆ ಇಳಿದಿದ್ದ ಕೇರಳ ಮೂಲದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಬಳಿಯ ತಲಪಾಡಿ ಪ್ರದೇಶದಲ್ಲಿ ನಡೆದಿದೆ. ಹರಿಪ್ರಸಾದ್ ಆಚಾರ್ಯ (36) ಮೃತ ವ್ಯಕ್ತಿ.

ಕೇರಳದ ಹೊಸಂಗಡಿ ದುರ್ಗಿಪಳ್ಳದ ನಿವಾಸಿಯಾಗಿರುವ ಹರಿಪ್ರಸಾದ್ ಆಚಾರ್ಯ ಸ್ನೇಹಿತರ ಜೊತೆ ಸೇರಿಕೊಂಡು ಸ್ನಾನ ಮಾಡಲೆಂದು ತಲಪಾಡಿಯ ಖಾಸಗಿ ಸ್ಥಳದಲ್ಲಿರುವ ಕೊಳಕ್ಕೆ ಇಳಿದಿದ್ದಾರೆ. ಈ ವೇಳೆ ಕೆಸರಿನಲ್ಲಿ ಸಿಲುಕಿದ ಹರಿಪ್ರಸಾದ್ ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ.

- Advertisement -

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಹರಿಪ್ರಸಾದ್ ಮೃತದೇಹ ಹೊರತೆಗೆದಿದ್ದಾರೆ. ಪ್ರಕರಣ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.