ಪತ್ನಿ ಕೊಂದು ಶವ ತುಂಡರಿಸಿ ಎಸೆದಿದ್ದ ಪತಿ ಬಂಧನ

Prasthutha|

►ಪತಿ ಪಂಕಜ್ ಮೌರ್ಯ, ಸ್ನೇಹಿತ ದುರ್ಜನ್ ಬಂಧಿತರು

- Advertisement -

ಲಕ್ನೋ: ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದು ಆಕೆಯ ಶವವನ್ನು ತುಂಡರಿಸಿ ಎಸೆದು ಪರಾರಿಯಾಗಿರುವ ಘಟನೆ ಇಲ್ಲಿನ  ಸೀತಾಪುರ ಎಂಬಲ್ಲಿ ನಡೆದಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಸೀತಾಪುರ ಜಿಲ್ಲೆಯ ರಾಮ್’ಪುರ ಕಲಾನ್ ಪ್ರದೇಶದ ನಿವಾಸಿ ಜ್ಯೋತಿ ಅಲಿಯಾಸ್ ಸ್ನೇಹಾ ಎಂಬಾಕೆ ಕೊಲೆಗೀಡಾದವರು. ಕೃತ್ಯ ನಡೆಸಿದ ಆಕೆಯ ಪತಿ ಪಂಕಜ್ ಮೌರ್ಯ ಹಾಗೂ ಆತನ ಸ್ನೇಹಿತ ದುರ್ಜನ್ ಪಾಸಿ ಎಂಬವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

- Advertisement -

ಪಂಕಜ್ ಹತ್ತು ವರ್ಷಗಳ ಹಿಂದೆ ಸ್ನೇಹಾಳನ್ನು ಮದುವೆಯಾಗಿದ್ದು, ಸ್ನೇಹಾ ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಹಲವು ದಿನಗಳಿಂದ ಆಕೆಗೆ ಬೇರೆಯವರ ಜೊತೆಗೂ ಸಂಬಂಧವಿದ್ದು, ಆಕೆ ಯಾರದ್ದೋ ಮನೆಯಲ್ಲಿ ಇರುತ್ತಿದ್ದಳು ಎನ್ನಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಸ್ನೇಹಾ ಹಾಗೂ ಪಂಕಜ್ ಮಧ್ಯೆ ಜಗಳವಾಗುತ್ತಿತ್ತು. ಇದರಿಂದಾಗಿ ಪಂಕಜ್ ತನ್ನ ಪತ್ನಿ ಸ್ನೇಹಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.

ಅದರಂತೆ ಯೋಜನೆಯನ್ನು ರೂಪಿಸಿ ತನ್ನ ಸ್ನೇಹಿತ ದುರ್ಜನ್ ಸಹಾಯದಿಂದ ಪತ್ನಿ ಸ್ನೇಹಾಳನ್ನು ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ಸ್ನೇಹಾಳ ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ್ದಾನೆ.

ಘಟನೆಗೆ ಸಂಬಂಧಿಸಿ ಸೀತಾಪುರ ಪೊಲೀಸರು ಗುಲಾರಿಹಾ ಪ್ರದೇಶದಿಂದ ಸ್ನೇಹಾಳ ದೇಹದ ಭಾಗಗಳನ್ನು ವಶಪಡಿಸಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ

Join Whatsapp