ಪ.ಬಂ. ರಾಜ್ಯಪಾಲ ಜಗದೀಪ್‌ ಧನ್ಕಾರ್‌ ಭ್ರಷ್ಟ ವ್ಯಕ್ತಿ; ಹಿಂದಕ್ಕೆ ಕರೆಸಿಕೊಳ್ಳಲು ಮೂರು ಪತ್ರ ಬರೆದಿದ್ದೇನೆ : ಮಮತಾ ಬ್ಯಾನರ್ಜಿ

Prasthutha|

ಕೊಲ್ಕತಾ : ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನ್ಕಾರ್‌ ಜೈನ್‌ ಹವಾಲಾ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲ್ಪಟ್ಟಿದ್ದ ಭ್ರಷ್ಟ ವ್ಯಕ್ತಿ ಎಂದು ಸಿಎಂ ಮಮತಾ ಬ್ಯಾನರ್ಜಿ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ.

- Advertisement -

ಧನ್ಕಾರ್‌ ಅವರನ್ನು ರಾಜ್ಯಪಾಲ ಸ್ಥಾನದಿಂದ ಹಿಂದಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿ ಮೂರು ಪತ್ರಗಳನ್ನು ಬರೆಯಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

“ಪಶ್ಚಿಮ ಬಂಗಾಳ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಾನು ಮೂರು ಪತ್ರ ಬರೆದಿದ್ದೇನೆ. ಅವರೊಬ್ಬ ಭ್ರಷ್ಟ ವ್ಯಕ್ತಿ. ೧೯೯೬ರ ಜೈನ್‌ ಹವಾಲಾ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಅವರು ಹೆಸರಿತ್ತು” ಎಂದು ಮಮತಾ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಈ ಆಪಾದನೆಗಳನ್ನು ಮಾಡಿದ್ದಾರೆ.

- Advertisement -

ನಮ್ಮ ಸರಕಾರ ದೊಡ್ಡ ಪ್ರಮಾಣದ ಬಹುಮತ ಪಡೆದಿರಾಗಲೂ ಅವರು ಯಾಕೆ ನಿರ್ದೇಶಿಸಬೇಕು? ಎಂದು ಮಮತಾ ಪ್ರಶ್ನಿಸಿದ್ದಾರೆ.



Join Whatsapp