ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ : ಸಮೀಕ್ಷೆಗಳ ಅಭಿಮತ

Prasthutha|

►ಇತರೆ ಸಮೀಕ್ಷೆಗಳು ಹೇಗಿದೆ ಗೊತ್ತಾ ?
►ಬಂಗಾಳದಲ್ಲಿ ಬಿಜೆಪಿ ಗೆಲ್ಲಲಿದೆ ಎಂದ ಸಮೀಕ್ಷೆ ಯಾರದ್ದು ?

ದೇಶದ 4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಗಳು ಮುಗಿದು ಜನರೀಗ ಫಲಿತಾಂಶದ ದಿನಕ್ಕಾಗಿ ಕಾದು ಕೂತಿದ್ದಾರೆ. ಫಲಿತಾಂಶ ಪೂರ್ವ ಸಮೀಕ್ಷೆಗಳು ಪಶ್ಚಿಮ ಬಂಗಾಳದ ಮಟ್ಟಿಗೆ ಮಮತಾರಿಗೆ ಸಿಹಿ ಸಿಂಚನವನ್ನು ನೀಡಿದೆ. ದೀದಿ ಬಂಗಾಳದ ರಾಣಿಯಾಗಿ ಮುಂದುವರಿಯಲಿದ್ದಾರೆ ಎಂದು ಬಹುತೇಕ ಸಮೀಕ್ಷೆಗಳು ಅಭಿಪ್ರಾಯಪಟ್ಟಿದೆ. ಟೈಮ್ಸ್ ನೌ ಮತ್ತು ಸಿ ವೋಟರ್ ಸಮೀಕ್ಷೆಗಳು ಮಮತಾರ ಪರ ಅಭಿಮತ ವ್ಯಕ್ತಪಡಿಸಿದೆ.

- Advertisement -

292 ಕ್ಷೇತ್ರಗಳ ಪೈಕಿ ದೀದಿಯ ಟಿಎಂಸಿ ಪಕ್ಷ 158 ಕ್ಷೇತ್ರಗಳನ್ನು ಗೆಲ್ಲಲಿದೆ. ಆ ಮೂಲಕ ಕಳೆದ ಬಾರಿಗಿಂತ 53 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ. ಪ್ರಬಲ ಪೈಪೋಟಿ ನೀಡಿರುವ ಬಿಜೆಪಿ ಬಂಗಾಳದಲ್ಲಿ ಈ ಬಾರಿ ಸುಮಾರು 115 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯನ್ನು ಟೈಮ್ಸ್ ನೌ ಮತ್ತು ಸಿ ವೋಟರ್ ಸಮೀಕ್ಷೆ ವ್ಯಕ್ತಪಡಿಸಿದೆ. 2016 ರ ಚುನಾವಣೆಯಲ್ಲಿ ಬಿಜೆಪಿ ಕೇವಲ 3 ಸ್ಥಾನಗಳನ್ನಷ್ಟೇ ಪಡೆದಿತ್ತು. ಆದರೆ ರಾಜ್ಯದಲ್ಲಿ ಧರ್ಮಾಧಾರಿತವಾಗಿ ಜನರನ್ನು ವಿಭಜಿಸಿರುವ ಬಿಜೆಪಿಗೆ ಈ ಬಾರಿ ಉತ್ತಮ ಸ್ಥಾನ ಗಳಿಸುವ ನಿರೀಕ್ಷೆ ಇದೆ.

ಎಬಿಪಿ – ಸಿ ವೋಟರ್ ಸಮೀಕ್ಷೆಯಲ್ಲಿ ಟಿಎಂಸಿ ಪಕ್ಷ 152 ರಿಂದ 164 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ವ್ಯಕ್ತಪಡಿಸಿದೆ. ಬಿಜೆಪಿ 109 ರಿಂದ 121 ಸ್ಥಾನಗಳಿಗೆ ತೃಪ್ತಿಪಟ್ಟೂಕೊಳ್ಳಲಿದೆ ಎಂದಿದೆ.  ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು 14 ರಿಂದ 25 ಸ್ಥಾನ ಗೆಲ್ಲುವುದಾಗಿ ಇವರ ಸಮೀಕ್ಷೆ ತಿಳಿಸಿದೆ.

ರಿಪಬ್ಲಿಕ್ ಟಿವಿ ಮಾತ್ರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 138-148 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ. ಅದು ಟಿಎಂಸಿ ಪಕ್ಷವು 128-138 ಸ್ಥಾನ ಗೆಲ್ಲಲಿದೆ ಮತ್ತು ಕಾಂಗ್ರೆಸ್ ಮಿತ್ರ ಪಕ್ಷಗಳು 11-21 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.

- Advertisement -