ಉಡುಪಿ : ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟೊಂದು ಗೋವಾ-ಮಹಾರಾಷ್ಟ್ರ ಕರಾವಳಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಮಲ್ಪೆ ಹನುಮಾನ್ ನಗರದ ತಾರಾನಾಥ ಕುಂದರ್ ಅವರಿಎಗ ಸೇರಿದ ‘ಮಥುರಾ’ ಹೆಸರಿನ ಆಳಸಮುದ್ರ ಬೋಟ್ ನ.17ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.
ನ.26ರಂದು 12:30ರ ಸುಮಾರಿಗೆ ಗೋವಾ-ಮಹಾರಾಷ್ಟ್ರ ಸಮುದ್ರ ಮಧ್ಯೆ ಸುಮಾರು 22 ಮಾರು ಆಳ ದೂರ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬೋಟಿನ ತಳಭಾಗಕ್ಕೆ ವಸ್ತುವೊಂದು ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಇದರಿಂದ ಬೋಟಿನ್ ಹಲ್ ಒಡೆದು ಸ್ಟೋರೇಜ್ ಮೂಲಕ ಸಮುದ್ರದ ನೀರು ಬೋಟಿನ ಒಳಗೆ ಬರಲು ಆರಂಭಿಸಿತು. ಅಪಾಯವನ್ನರಿತ ಬೋಟಿನಲ್ಲಿದ್ದ ಮೀನುಗಾರರು ಹತ್ತಿರದಲ್ಲಿದ್ದ ಇತರ ಬೋಟಿನವರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಬೋಟಿನಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ದಡ ಸೇರಿಸಲಾಗಿದೆ.
ಸುಮಾರು 65 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.