ಮಂಗಳೂರು | ರೌಡಿ ಶೀಟರ್ ಇಂದ್ರಜೀತ್ ಕೊಲೆ ಕೇಸ್ ; 8 ಮಂದಿ ವಶಕ್ಕೆ

Prasthutha|

ಮಂಗಳೂರು : ನಗರದ ಕುದ್ರೋಳಿ ಸಮೀಪದ ಕರ್ನಲ್ ಗಾರ್ಡನ್ ಬಳಿ ನಡೆದಿದ್ದ ಬೊಕ್ಕಪಟ್ಣ ನಿವಾಸಿ ಇಂದ್ರಜೀತ್ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಬಂಧಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ವಶಕ್ಕೆ ಪಡೆದವರನ್ನು ತನಿಖೆ ನಡೆಸಲಾಗುತ್ತಿದೆ. ರೌಡಿ ಶೀಟರ್ ಇಂದ್ರಜೀತ್ ಬುಧವಾರ ರಾತ್ರಿ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ. ಕಾರ್ಯಕ್ರಮದಿಂದ ಹಿಂದಿರುಗುವಾಗ ಗುಂಪೊಂದು ಕಾದು ಕುಳಿತು ಈತನ ಹತ್ಯೆ ಮಾಡಿದೆ ಎಂದು ಶಂಕಿಸಲಾಗಿದೆ.

- Advertisement -

ಬರ್ಕೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ 17 ಮಂದಿಯನ್ನು ಪ್ರಶ್ನಿಸಲಾಗಿದ್ದು, ಅವರಲ್ಲಿ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಹಳೆಯ ದ್ವೇಷ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರಿದಿದೆ.  

- Advertisement -