ಮಲಯಾಳಂ ಹಾಸ್ಯ ನಟ ಮಾಮುಕೋಯ ನಿಧನ

Prasthutha|

ಕಲ್ಲಿಕೋಟೆ: ಮಲಯಾಳಂ ಚಿತ್ರರಂಗದ ಜನಪ್ರಿಯ ಹಾಸ್ಯನಟ ಮಾಮುಕೋಯ ನಿಧನರಾಗಿದ್ದಾರೆ.

- Advertisement -

ನಟ ಮಾಮುಕೋಯ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ನ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಮಲಪ್ಪುರಂ ಪೂಂಙೋಟ್ ಸೆವೆನ್ಸ್ ಫುಟ್ಬಾಲ್ ಪಂದ್ಯದ ಉದ್ಘಾಟನಾ ಸಮಾರಂಭದ ವೇಳೆ ಅಸ್ವಸ್ಥಗೊಂಡ ಮಾಮುಕೋಯ ಅವರನ್ನು ಮೊದಲು ವಂಡೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಕಲ್ಲೀಕೋಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.

- Advertisement -

ಹೃದಯಾಘಾತದ ಜೊತೆಗೆ ಮೆದುಳಿನ ರಕ್ತಸ್ರಾವದಿಂದಾಗಿ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು.

ಕಲ್ಲೀಕೋಟೆ ಮೂಲದ ಮಾಮುಕೋಯ ಅವರು ನಾಟಕ ರಂಗಭೂಮಿ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದವರಾಗಿದ್ದಾರೆ. ಕಲ್ಲೀಕೋಟೆ ಶೈಲಿಯ ಸಂಭಾಷಣೆಯ ಕೌಶಲ್ಯದಿಂದಾಗಿ ಅವರು ಸಿನಿಮಾ ರಂಗದಲ್ಲಿ ಇನ್ನಷ್ಟು ಉತ್ತುಂಗಕ್ಕೇರಿದ್ದರು.

1946 ರಲ್ಲಿ ಕಲ್ಲೀಕೋಟೆಯ ಪಲ್ಲಿಕಂಡಿಯಲ್ಲಿ ಮುಹಮ್ಮದ್ ಮತ್ತು ಇಂಬಚ್ಚಿ ಆಯೇಷಾ ಮಗನಾಗಿ ಜನಿಸಿದರು.

ಕಲ್ಲೀಕೋಟೆಯ ಎಂಎಂ ಹೈಸ್ಕೂಲ್‌ನಲ್ಲಿ 10ನೇ ತರಗತಿವರೆಗೆ ಓದಿದ್ದ ಅವರು ಓದುವ ಸಮಯದಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದರು.

Join Whatsapp