ಕಣ್ಣೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹಸಿರು ನಿಶಾನೆ ತೋರಿಸಿದ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿನಲ್ಲಿ ಸೋರಿಕೆಯುಂಟಾಗಿದೆ. ಮಂಗಳವಾರ ಸುರಿದ ಮಳೆಗೆ ರೈಲಿನ ಎಕ್ಸಿಕ್ಯೂಟಿವ್ ಬೋಗಿಯ ಮೇಲ್ಛಾವಣಿಯಲ್ಲಿ ಸೋರಿಕೆಯುಂಟಾಗಿದ್ದು ಬೋಗಿಯಲ್ಲಿ ಮಳೆ ನೀರು ತುಂಬಿತ್ತು.
ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಕಾಸರಗೋಡಿನಿಂದ ಹೊರಟ ರೈಲು ಕಣ್ಣೂರಿಗೆ ತಲುಪಿತ್ತು. ಕಣ್ಣೂರಿನಲ್ಲಿ ರಾತ್ರಿ ಭಾರಿ ಮಳೆಯಾದ್ದರಿಂದ ಮುಂಜಾನೆ ಬೋಗಿಯಲ್ಲಿ ನೀರು ತುಂಬಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ. ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ರಿಪೇರಿ ಕೆಲಸಗಳು ನಡೆಯುತ್ತಿವೆ.