ಕಾರಿನ ಡೋರಿನಲ್ಲಿ ನೇತಾಡಿ ರೋಡ್ ಶೋ; ಸಂಚಾರ ನಿಯಮ ಉಲ್ಲಂಘಿಸಿದ ಪ್ರಧಾನಿ ವಿರುದ್ಧ ದೂರು ದಾಖಲು

Prasthutha|

ಕೊಚ್ಚಿ: ರೋಡ್ ಶೋ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು ನೀಡಲಾಗಿದೆ. ದೂರುದಾರ ತಿರುವಿಲ್ವಮಲ ನಿವಾಸಿ ಜಯಕೃಷ್ಣನ್, ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

- Advertisement -


ಡಿಜಿಪಿ ಮತ್ತು ಮೋಟಾರು ವಾಹನ ಇಲಾಖೆಗೆ ದೂರು ನೀಡಲಾಗಿದ್ದು, ಚಾಲಕನಿಗೆ ಕಾರು ಚಾಲನೆ ಮಾಡಲು ತೊಂದರೆಯಾಗುವ ರೀತಿಯಲ್ಲಿ ಗಾಜಿನ ಮೇಲೆ ಹೂವು ಹಾಕಲಾಗಿದೆ. ಮಾತ್ರವಲ್ಲ ಕಾರಿನ ಡೋರ್ ತೆರೆದು ನೇತಾಡಿ ಪ್ರಧಾನಿ ಯಾತ್ರೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಸಮಾಜಕ್ಕೆ ಮನವರಿಕೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ದೂರುದಾರ ಒತ್ತಾಯಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋನಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಕೇರಳೀಯ ವೇಷ ಧರಿಸಿದ ಮೋದಿ, ಮೊದಲು ಕಾಲ್ನಡಿಗೆಯಲ್ಲಿ ನಂತರ ತಮ್ಮ ಕಾರಿನ ಬಾಗಿಲನ್ನು ತೆರೆದು ಫುಟ್ ಬೋರ್ಡ್ ಮೇಲೆ ನೇತಾಡುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದ ಸಾವಿರಾರು ಜನರತ್ತ ಕೈಬೀಸಿದರು. ತಿರುವನಂತಪುರದಲ್ಲೂ ಕೂಡ ಮೋದಿ ಇದೇ ರೀತಿ ಪ್ರಯಾಣಿಸಿದ್ದರು.

Join Whatsapp