ಚೊಚ್ಚಲ ಹಾಕಿ ಫೈವ್ಸ್: ಭಾರತದ ಪುರುಷರ ತಂಡ ಚಾಂಪಿಯನ್

Prasthutha|

ನವದೆಹಲಿ: ಸಾಂಪ್ರದಾಯಿಕ ಮಾದರಿಯ ಹೊರತಾಗಿ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ನಡೆದ ಹೀರೋ ಎಫ್ ಐಚ್ ಹಾಕಿ ಫೈವ್ಸ್ ಟೂರ್ನಿಯಲ್ಲಿ ಭಾರತದ ಪುರುಷರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

- Advertisement -

ಪ್ರಶಸ್ತಿ ಸುತ್ತಿನಲ್ಲಿ ಭಾರತ, ಪೋಲೆಂಡ್ ತಂಡವನ್ನು 6-4 ಅಂತರದಲ್ಲಿ ಮಣಿಸಿತು. ಮಹಿಳೆಯರ ವಿಭಾಗದಲ್ಲಿ ಉರುಗ್ವೆ ತಂಡ ಚಾಂಪಿಯನ್ ಪಟ್ಟವನ್ನಲಂಕರಿಸಿದೆ. ಟೂರ್ನಿಯಲ್ಲಿ ಒಟ್ಟು 10 ಗೋಲು ದಾಖಲಿಸಿದ ಭಾರತದ ಮುಹಮ್ಮದ್ ರಾಹೀಲ್ ಟೂರ್ನಿಯ ಟಾಪ್ ಸ್ಕೋರರ್ ಪ್ರಶಸ್ತಿ ಪಡೆದರು.

ಸ್ವಿಝರ್ ಲ್ಯಾಂಡ್ ನ ಲುಸ್ಸಾನೆಯಲ್ಲಿ ನಡೆದ 20 ನಿಮಿಷಗಳ ಫೈನಲ್ ಪಂದ್ಯದಲ್ಲಿ ಒಂದು ಹಂತದಲ್ಲಿ ಭಾರತ 0-3 ಗೋಲುಗಳ ಅಂತರದಲ್ಲಿ ಹಿನ್ನಡೆ ಸಾಧಿಸಿತ್ತು. ಪಂದ್ಯ ಪ್ರಾರಂಭವಾಗಿ ಮೊದಲ ನಿಮಿಷದಲ್ಲೇ ಮಾಟೆಸ್ಜ್ ನೊವಾಕೊವ್ಸ್ಕಿ, 5ನೇ ನಿಮಿಷದಲ್ಲಿ ವೊಜ್ಸಿಚ್ ರುಟ್ಕೊವ್ಸ್ಕಿ ಮತ್ತು ನಾಯಕ ರಾಬರ್ಟ್ ಪಾವ್ಲಾಕ್ ಗೋಲು ಗಳಿಸಿದ್ದರು. ಆದರೆ ಅಮೋಘ ಕಮ್ ಬ್ಯಾಕ್ ಮಾಡಿದ ಭಾರತೀಯರು ಪೋಲೆಂಡ್ ಉತ್ಸಾಹಕ್ಕೆ ತಣ್ಣೀರೆರಚಿದರು. ಕ್ರಮವಾಗಿ ಎಂಟು ಮತ್ತು ಒಂಬತ್ತನೇ ನಿಮಿಷದಲ್ಲಿ ಸಂಜಯ್ ಮತ್ತು ನಾಯಕ ಗುರಿಂದರ್ ಸಿಂಗ್ ಗೋಲು ಗಳಿಸುವ ಮೂಲಕ  ಅಂತರವವನ್ನು2-3 ಗೋಲಿಗೆ ತಂದು ನಿಲ್ಲಿಸಿದ್ದರು. ದ್ವಿತಿಯಾರ್ಧದ 11ನೇ ನಿಮಿಷದಲ್ಲಿ ಧಾಮಿ ಬಾಬಿ ಸಿಂಗ್, 13ನೇ ನಿಮಿಷದಲ್ಲಿ ರಾಹೀಲ್ ಮುಹಮ್ಮದ್  ಗಳಿಸಿದ ಅತ್ಯುತ್ತಮ ಫೀಲ್ಡ್ ಗೋಲಿನ ನೆರವಿನಿಂದ ಭಾರತ ಮುನ್ನಡೆ ಸಾಧಿಸಿತು. ನಂತರದಲ್ಲೂ ಆಕ್ರಮಣಕಾರಿ ಆಟವಾಡಿದ ಭಾರತ 17ನೇ ನಿಮಿಷದಲ್ಲಿ ರಾಹೀಲ್ ಮತ್ತು ಸಿಂಗ್ 19ನೇ ನಿಮಿಷದಲ್ಲಿ ಗೋಲು ದಾಖಲಿಸಿ  ಹಾಕಿ ಫೈವ್ಸ್ ಚಾಂಪಿಯನ್ಶಿಪ್ ಅನ್ನು ಮುಡಿಗೇರಿಸಿಕೊಂಡರು.

- Advertisement -

ಐದು ತಂಡಗಳು ಭಾಗವಹಿಸಿದ್ದ ಲೀಗ್ ಹಂತದಲ್ಲಿ ಭಾರತ, ಮೂರು ಗೆಲುವು ಮತ್ತು ಒಂದು ಪಂದ್ಯದಲ್ಲಿ ಡ್ರಾ ಸಾಧಿಸುವುದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿತ್ತು. ಬಳಿಕ ಅಜೇಯವಾಗಿ ಹಾಕಿ ಫೈವ್ಸ್ ಅಭಿಯಾನವನ್ನು ಕೊನೆಗೊಳಿಸಿದೆ.

ಪೊಲೆಂಡ್ ವಿರುದ್ಧ ಎರಡು ಸೇರಿದಂತೆ ಭಾನುವಾರ ಭಾರತ ಆಡಿದ ಮೂರು ಪಂದ್ಯಗಳಲ್ಲಿ ಭಾರತ ಜಯಗಳಿಸಿದೆ. ಮೊದಲ ಪಂದ್ಯದಲ್ಲಿ ಮಲೇಷ್ಯ ತಂಡವನ್ನು 7-3 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ, ಫೈನಲ್ ಪಂದ್ಯಕ್ಕೂ ಮೂರುವರೆ ಗಂಟೆಗಳ ಮೊದಲು ನಡೆದ  ರೌಂಡ್ ರಾಬಿನ್ ಲೀಗ್ ಹಂತದ ಪಂದ್ಯದಲ್ಲಿ 6-2 ಗೋಲುಗಳ ಅಂತರದಲ್ಲಿ ಪೋಲೆಂಡ್ ತಂಡವನ್ನು ಸೋಲಿಸಿತ್ತು. ಶನಿವಾರ ಸ್ವಿಜರ್ಲ್ಯಾಂಡ್ ವಿರುದ್ಧ 4-3 ಅಂತರದಲ್ಲಿ ಭಾರತ ಜಯ ಸಾಧಿಸಿತ್ತು. ಮತ್ತೊಂದೆಡೆ ತಲಾ ಎರಡು ಗೆಲುವು ಮತ್ತು ಸೋಲುಗಳೊಂದಿಗೆ ಪೊಲೆಂಡ್, ಲೀಗ್ ಹಂತದಲ್ಲಿ ಎರಡನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿತ್ತು. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ 5-5 ಅಂತರದಲ್ಲಿ ಡ್ರಾ ಸಾಧಿಸಿದ ಪಾಕಿಸ್ತಾನ, ಫೈನಲ್ ಅರ್ಹತೆಯನ್ನು ಸ್ವಲ್ಪ ಅಂತರದಲ್ಲಿಯೇ ಕಳೆದುಕೊಂಡಿತ್ತು.

Join Whatsapp