ಕಂಗನಾಳ ಮೂರ್ಖತನದ ಹೇಳಿಕೆಗೆ ಬೆಂಬಲವಿಲ್ಲ: ಸಂಸದೆ ಮಹುವಾ

Prasthutha|

ಹೊಸದಿಲ್ಲಿ: ಉತ್ತಮ ಆಲೋಚನೆ ಮಾಡುವ ಪ್ರತಿಯೊಬ್ಬ ಭಾರತೀಯರ ಪರವಾಗಿ ಮಾತನಾಡಲು ತನ್ನನ್ನು ಆಯ್ಕೆ ಮಾಡಲಾಗಿದೆ. ಕಂಗನಾ ರಾಣಾವತ್ ಅವರ ಮೂರ್ಖತನವನ್ನು ಸಮರ್ಥಿಸುವ ಕೆಲಸ ಸಂಘಪರಿವಾರದ್ದಾಗಿದೆ. ಅವರು ಅದನ್ನು ಮಾಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ, ಸಂಸದೆ ಮಹುವಾ ಮೊಯಿತ್ರಾ ಹೇಳಿದರು.

- Advertisement -

ಮೋದಿ ಸರ್ಕಾರವನ್ನು ಟೀಕಿಸಿದ್ದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಗೆ ಬೆಂಬಲ ನೀಡಿದ್ದ ಮಹುವಾ ಅವರಿಗೆ ಕಂಗನಾ ವಿಷಯದಲ್ಲಿ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ಪತ್ರಕರ್ತರೊಬ್ಬರು ಕೇಳಿದಾಗ, ಮೂರ್ಖರಿಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಉತ್ತಮ ಆಲೋಚನೆ ಮಾಡುವ ಪ್ರತಿಯೊಬ್ಬ ಭಾರತೀಯರ ಪರವಾಗಿ ಮಾತನಾಡಲು ತನ್ನನ್ನು ಆಯ್ಕೆ ಮಾಡಲಾಗಿದೆ. ಕಂಗನಾ ರಾಣಾವತ್ ಅವರ ಮೂರ್ಖತನವನ್ನು ಸಮರ್ಥಿಸುವ ಕೆಲಸ ಸಂಘಪರಿವಾರದವರದ್ದಾಗಿದೆ. ಅವರು ಅದನ್ನು ಮಾಡುತ್ತಿದ್ದಾರೆ. ನಾವು ಮೂರ್ಖರಿಗೆ ಬೆಂಬಲ ನೀಡುವುದಿಲ್ಲ ಎಂದು ಮಹುವಾ ಹೇಳಿದರು.

- Advertisement -

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿರುವುದು 2014ರಲ್ಲಿ ಎಂಬ ಕಂಗನಾ ರಾಣಾವತ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.



Join Whatsapp