ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದ ಮಧುಗಿರಿ ಮೋದಿ

Prasthutha: June 21, 2021

ತುಮಕೂರು : ನನಗೆ ದಯಾಮರಣ ನೀಡಿ ಎಂದು ರಾಜ್ಯ ಹಿಂದು ಸಾಮ್ರಾಟ್ ಧರ್ಮಸೇನೆಯ ಸಂಸ್ಥಾಪಕ ಮಧುಗಿರಿ ಮೋದಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಲವ್ ಜಿಹಾದ್ , ಗೋಹತ್ಯೆ , ಅತ್ಯಾಚಾರ , ಭಯೋತ್ಪಾದನೆ, ಭ್ರಷ್ಟಾಚಾರ ವಿರುಧ್ದ ನಿರಂತರ ಹೋರಾಟ ನಡೆಸುತ್ತಿದ್ದೇನೆ, ಆದರೆ ಜಿಲ್ಲಾ ಪೋಲಿಸ್ ಇಲಾಖೆ ನನ್ನನ್ನು ನಿರಂತರ ವಿಚಾರಣೆ ನೆಪದಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪೋಲಿಸರು ಹಲವು ಬಾರಿ ನನ್ನನ್ನು ಸುಳ್ಳು ಕೇಸು ದಾಖಲಿಸಿ ಬಂಧಿಸಿದ್ದಾರೆ, ಆದರೆ ಹಿಂದು ಸಮಾಜ ನನ್ನ ಬೆಂಬಲಕ್ಕೆ ನಿಲ್ಲದಿರುವುದು ಬೇಸರವಾಗಿದೆ , ಸದಾ ಪೋಲಿಸರ ಕಿರುಕುಳವನ್ನು ಸಹಿಸಲಾಗುತ್ತಿಲ್ಲ , ಆದ್ದರಿಂದ ನನಗೆ ದಯಾಮರಣವನ್ನು ನೀಡಿ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದೇನೆ ಎಂದು ಮಧುಗಿರಿ ಮೋದಿ ತಿಳಿಸಿದ್ದಾರೆ.

ಅತ್ಯಾಚಾರಿಗಳು, ಭ್ರಷ್ಟರು, ಭಯೋತ್ಪಾಧಕರಿಗಿಲ್ಲದ ವಿಚಾರಣೆ, ಮಾನಸಿಕ ಕಿರುಕುಳ ನನಗೇಕೆ ? ಇದನ್ನೆಲ್ಲಾ ಪ್ರಶ್ನಿಸಲು ನನ್ನವರ್ಯಾರೂ ಇಲ್ಲ ನಾನೇ ಪ್ರಶ್ನಿಸಬೇಕು ಎಂದಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ