ಭಾರತದಿಂದ ವಿಮಾನ ಹಾರಾಟ ನಿಷೇಧವನ್ನು ಒಂದು ತಿಂಗಳಿಗೆ ವಿಸ್ತರಿಸಿದ ಕೆನಡಾ

Prasthutha|

ಹೊಸದಿಲ್ಲಿ: ದೇಶದಾದ್ಯಂತ ಕೋವಿಡ್ ಸೋಂಕಿನ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಾರತದಿಂದ ವಿಮಾನಗಳ ಹಾರಾಟ ನಿಷೇಧವನ್ನು ಕೆನಡಾ ಇನ್ನೂ ಒಂದು ತಿಂಗಳಿಗೆ ವಿಸ್ತರಿಸಿದೆ. ಈ ಕುರಿತು ಕೆನಡಾ ಸರ್ಕಾರ ಶೀಘ್ರದಲ್ಲೇ ಘೋಷಣೆ ಮಾಡಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ನಿರ್ಧಾರವನ್ನು ಭಾರತ ಸರ್ಕಾರಕ್ಕೆ ಮುಂಚಿತವಾಗಿಯೇ ತಿಳಿಸಲಾಗಿದೆ ಎಂದು ವರದಿಯಾಗಿದೆ. 

- Advertisement -

ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಏಪ್ರಿಲ್ 22 ರಿಂದ ಭಾರತದಿಂದ ನೇರ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು. ಆರಂಭದಲ್ಲಿ ಒಂದು ತಿಂಗಳವರೆಗೆ ಘೋಷಿಸಲಾಗಿತ್ತಾದರೂ ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಇನ್ನೂ ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ.

ಕೆನಡಾದಲ್ಲಿ ಕೊರೊನಾ ವೈರಸ್ ನ ಡೆಲ್ಟಾ ರೂಪಾಂತರದ ಹಲವಾರು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಭಾರತದಿಂದ ನೇರ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು.

Join Whatsapp