ಕುರ್ ಆನ್, ಬೈಬಲ್, ಗುರು ಗ್ರಂಥ ಸಾಹಿಬ್ ಕೂಡ ಪಠ್ಯದಲ್ಲಿರಲಿ: ಕಾಂಗ್ರೆಸ್

Prasthutha|

ಭೋಪಾಲ್: ಮಧ್ಯ ಪ್ರದೇಶದ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪದವಿ ಪಠ್ಯದಲ್ಲಿ ಮಹಾಭಾರತ, ರಾಮಾಯಣ ಸೇರಿಸುವ ಮಾತಾಡಿದ್ದಾರೆ. ಬಹಳ ಒಳ್ಳೆಯ ವಿಷಯ. ಅದರ ಜೊತೆಗೆ ಕುರ್ ಆನ್, ಬೈಬಲ್, ಗುರು ಗ್ರಂಥ ಸಾಹಿಬ್ ವಿಷಯಗಳನ್ನು ಪಠ್ಯಗಳಲ್ಲಿ ಸೇರಿಸಲಿ ಎಂದು ಕಾಂಗ್ರೆಸ್ ಹೇಳಿದೆ.


ಮುಖ್ಯಮಂತ್ರಿ ಬರೇ ಒಂದು ಧರ್ಮದ ಬಗೆಗೆ ಯೋಚಿಸದಿರಲಿ. ಅದು ವಿದ್ಯಾರ್ಥಿಗಳ ನಡುವೆ ಕಂದರ ತೋಡುತ್ತದೆ. ಬಹು ಧರ್ಮೀಯರ ದೇಶವಿದು. ಸರ್ವರಿಗೂ ಸಮ ಬಾಳು ಎಂಬುದು ವಿಚಾರದಲ್ಲಿಯೂ ಇರಬೇಕು ಎಂದು ಮಧ್ಯ ಪ್ರದೇಶದ ಕಾಂಗ್ರೆಸ್ ವಕ್ತಾರ ಆರಿಫ್ ಮಸೂದ್ ಹೇಳಿದರು.

- Advertisement -