ಉತ್ತರ ಪ್ರದೇಶ, ಉತ್ತರಾಖಂಡ ಅಂತರ್ ಧರ್ಮೀಯ ವಿವಾಹ ಕಾನೂನುಗಳ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

Prasthutha|

ಲಖನೌ : ‘ಲವ್ ಜಿಹಾದ್’ ತಡೆ ಕುರಿತು ಎನ್ನಲಾದ ಉತ್ತರ ಪ್ರದೇಶದ ಕಾನೂನು ಬಾಹಿರ ಧಾರ್ಮಿಕ ಮತಾಂತರ ತಡೆ ವಿಧೇಯಕ 2020 ಮತ್ತು ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2018ರ ಸಾಂವಿಧಾನಿಕ ಮಾನ್ಯತೆಯ ಕುರಿತು ಪ್ರಮುಖ ಮಾನವ ಹಕ್ಕುಗಳ ಸಂಘಟನೆ ಸಿಟಿಝನ್ಸ್ ಫಾರ್ ಜಸ್ಟೀಸ್ ಆಂಡ್ ಪೀಸ್ ಸಂಸ್ಥೆಯು ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

- Advertisement -

ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಕಾನೂನುಗಳ ಜನರ ತಮ್ಮ ವೈಯಕ್ತಿಕ ಆಯ್ಕೆಯ ಮೇಲೆ ಪರಿಣಾಮ ಬೀರುವಂತಿದೆ ಮತ್ತು ದೇಶದ ಜಾತ್ಯತೀಯ ನಂಟಿಗೆ ವಿರೋಧಾಭಾಸವಾಗಿದೆ ಎಂದು ಸಿಪಿಜೆ ತನ್ನ ಅರ್ಜಿಯಲ್ಲಿ ಕೋರ್ಟ್ ಗೆ ಮನವರಿಕೆ ಮಾಡಲು ಯತ್ನಿಸಿದೆ.

ಉತ್ತರ ಪ್ರದೇಶದಲ್ಲಿ ಕಾನೂನು ಜಾರಿಯಾದ ಕೆಲವೇ ವಾರಗಳಲ್ಲಿ ವಯಸ್ಕ ಜೋಡಿಗಳ ಮೇಲೆ ಹಿಂಸೆ ಮತ್ತು ಬೆದರಿಕೆಯೊಡ್ಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.  



Join Whatsapp