ಪ್ರಧಾನಿ ಮೋದಿಯವರ ವಾರಾಣಸಿ ಕಚೇರಿಯನ್ನೇ ಒಎಲ್ ಎಕ್ಸ್ ನಲ್ಲಿ ‘ಸೇಲ್’ ಮಾಡಲು ಹೊರಟ ಕಿಲಾಡಿಗಳು! | ನಾಲ್ವರ ಬಂಧನ

Prasthutha|

ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯನ್ನೇ ‘ಸೇಲ್’ಗಿಟ್ಟ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ಮೋದಿಯವರ ವಾರಾಣಸಿ ಕಚೇರಿಯನ್ನು ಆರೋಪಿಗಳು ಮಾರಾಟಕ್ಕಿದೆ ಎಂದು ಒಎಲ್ ಎಕ್ಸ್ ನಲ್ಲಿ ಜಾಹೀರಾತು ಪ್ರಕಟಿಸಿದ್ದರು ಎನ್ನಲಾಗಿದೆ.

ವಾರಾಣಸಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರಧಾನಿ ಮೋದಿಯವರ ‘ಜನಸಂಪರ್ಕ ಕಚೇರಿ’ಯ ಫೋಟೊ ತೆಗೆದು, ಅದನ್ನು ಒಎಲ್ ಎಕ್ಸ್ ನಲ್ಲಿ ‘ಸೇಲ್’ಗಿದೆ ಎಂದು ಜಾಹೀರಾತು ಹಾಕಿದ್ದರು. 2014ರ ಲೋಕಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಾರಾಣಸಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

- Advertisement -