ದೇಶದಲ್ಲಿ ಶೇ.60 ರಷ್ಟು ಮಹಿಳೆಯರು ಇಂಟರ್ನೆಟ್ ಅನ್ನೇ ಬಳಸಿಲ್ಲ: ಸಮೀಕ್ಷೆ

Prasthutha|

ದೇಶದ ಶೇ.60 ರಷ್ಟು ಮಹಿಳೆಯರು ಇಂಟರ್ನೆಟ್ ಅನ್ನೇ ಬಳಸಿಲ್ಲ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್.ಎಫ್.ಎಚ್.ಎಸ್) ಮಾಹಿತಿಯು ಭಾರತದಲ್ಲಿ ಡಿಜಿಟಲ್ ವಿಭಜನೆಯ ವ್ಯಾಪ್ತಿಯನ್ನು ಬಹಿರಂಗಪಡಿಸಿದೆ.

- Advertisement -

ಭಾರತದ 22 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಶೇ.60ಕ್ಕೂ ಹೆಚ್ಚು ಮಹಿಳೆಯರು ಇಂಟರ್ನೆಟ್ ಅನ್ನೇ ಉಪಯೋಗಿಸಿಲ್ಲ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರ(ಶೇ.38 ), ದಿಯು ಮತ್ತು ದಮನ್‌(ಶೇ.36.7), ಕರ್ನಾಟಕ(ಶೇ.35), ಅಂಡಮಾನ್‌ ಮತ್ತು ನಿಕೋಬಾರ್‌(ಶೇ.34.8), ಮೇಘಾಲಯ(ಶೇ.34.7), ಗುಜರಾತ್‌(ಶೇ.30.8), ಅಸ್ಸಾಂ(ಶೇ.28.2), ತೆಲಂಗಾಣ(ಶೇ.26.5), ಪಶ್ಚಿಮ ಬಂಗಾಳ(ಶೇ.25.5), ತ್ರಿಪುರ(ಶೇ.22.9), ಆಂಧ್ರ ಪ್ರದೇಶ(ಶೇ.21), ಬಿಹಾರ(ಶೇ.20.6) ಪ್ರದೇಶಗಳಲ್ಲಿ ಶೇ.40ಕ್ಕಿಂತಲೂ ಕಡಿಮೆ ಮಹಿಳೆಯರು ಇಂಟರ್ನೆಟ್ ಬಳಸುತ್ತಿದ್ದಾರೆ ಎಂದು ಎನ್.ಎಫ್.ಎಚ್.ಎಸ್ ಬಹಿರಂಗಪಡಿಸಿದೆ.

- Advertisement -

ಸಮೀಕ್ಷೆ ಪ್ರಕಾರ, ಆಂಧ್ರಪ್ರದೇಶ(ಶೇ.48.8), ಪಶ್ಚಿಮ ಬಂಗಾಳ(ಶೇ.46.7), ಅಂಡಮಾನ್‌ ಮತ್ತು ನಿಕೋಬಾರ್(ಶೇ.46.5), ತ್ರಿಪುರ(ಶೇ.45.7), ಬಿಹಾರ(ಶೇ.43.6), ಅಸ್ಸಾಂ(ಶೇ.42.3), ಮೇಘಾಲಯ(ಶೇ.42.1) ಪ್ರದೇಶಗಳಲ್ಲಿ ಪುರುಷರು ಅತಿಹೆಚ್ಚು ಇಂಟರ್ನೆಟ್ ಬಳಸುತ್ತಾರೆ ಎಂದು ತಿಳಿದುಬಂದಿದೆ.

ಸಮೀಕ್ಷೆಯ ವೇಳೆ ಸುಮಾರು 6.1 ಲಕ್ಷ ಮನೆಗಳಿಂದ ಜನಸಂಖ್ಯೆ, ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಠಿಕಾಂಶಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ.

Join Whatsapp