ಲವ್-ಜಿಹಾದ್ ಪ್ರಕರಣ: ಮುಸ್ಲಿಂ ಉದ್ಯಮಿಯನ್ನು ಸಿಲುಕಿಸಲು ಮಹಿಳೆಯೊಬ್ಬಳ ನೇಮಿಸಿದ ಬಲಪಂಥೀಯರು

Prasthutha|

ಲಕ್ನೋ: ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ನಡೆದ ಅತ್ಯಾಚಾರ ಮತ್ತು ಲವ್ ಜಿಹಾದ್ ಪ್ರಕರಣದಲ್ಲಿ 27 ವರ್ಷದ ಮುಸ್ಲಿಂ ಉದ್ಯಮಿಯನ್ನು ಸಿಲುಕಿಸಲು ಷಡ್ಯಂತ್ರ ಹೆಣೆದದ್ದು ಬಯಲಾಗಿದೆ. ಮುಸ್ಲಿಂ ಉದ್ಯಮಿಯನ್ನು ಪ್ರಕರಣದಲ್ಲಿ ಸಿಲುಕಿಸಲು ತನ್ನನ್ನು ‘ನೇಮಿಸಿಕೊಳ್ಳಲಾಗಿದೆ’ ಎಂದು ದೆಹಲಿ ಮೂಲದ 24 ವರ್ಷದ ಹಿಂದೂ ಮಹಿಳೆಯೊಬ್ಬಳು ಬಾಯಿಬಿಟ್ಟಿದ್ದಾಳೆ.

- Advertisement -

ಈ ಹಿಂದೆ ಪ್ರಿನ್ಸ್ ಖುರೇಷಿ ಎಂಬ ವ್ಯಕ್ತಿ ತನ್ನನ್ನು ‘ಮೋನು ಗುಪ್ತಾ’ ಎಂದು ಬಿಂಬಿಸಿ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದು, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ  ಎಂದು ರಾಧಾ ಎಂಬ ಮಹಿಳೆ ಆರೋಪಿಸಿದ್ದಳು. ಆಕೆಯ ದೂರಿನ ಮೇರೆಗೆ  ಖುರೇಷಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಜುಲೈ 16 ರಂದು ಪ್ರಕರಣ ದಾಖಲಿಸಲಾಗಿತ್ತು.

ಆದರೆ ನ್ಯಾಯಾಲಯದಿಂದ ಆಕೆಯ ವಿರುದ್ಧ ತೀರ್ಪು ಬಂದಿದ್ದು,  ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು ಮತ್ತು ಅವರ ದೂರು ಸುಳ್ಳು ಕಂಡುಬಂದರೆ ಜೈಲಿಗೆ ಹೋಗಬೇಕಾಗಬಹುದು ಎಂದು ಎಂದು ನ್ಯಾಯಾಧೀಶರು ಹೇಳಿದ್ದರು.  .

- Advertisement -

ಆನಂತರ ಮಹಿಳೆ ಹೇಳಿಕೆಯನ್ನು ಬದಲಾಯಿಸಿದ್ದಲ್ಲದೆ, ಆರೋಪಿ ಪ್ರಿನ್ಸ್ ಖುರೇಷಿ ವಿರುದ್ಧದ ಆರೋಪಗಳನ್ನು ಹಿಂಪಡೆದಿದ್ದಾರೆ.

ಖುರೇಷಿ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಲು ಅಮನ್ ಚೌಹಾಣ್ ಮತ್ತು ಆಕಾಶ್ ಸೋಲಂಕಿ  ತನ್ನನ್ನು ನೇಮಿಸಿಕೊಂಡಿದ್ದಾಗಿ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸುವಾಗ ಹೇಳಿದ್ದಾರೆ. ಚೌಹಾಣ್ ಫೇಸ್ ಬುಕ್ ನಲ್ಲಿ ಬಿಜೆಪಿ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ.

ರಾಧಾ ಅವರೊಂದಿಗೆ ಇವರಿಬ್ಬರ ವಿರುದ್ಧ ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಇದಕ್ಕೂ ಮೊದಲು, ಚೌಹಾನ್ ಮತ್ತು ಸೋಲಂಕಿ  ಹಾಗೂ ಹಿಂದೂ ಬಲಪಂಥೀಯ ಸಂಘಟನೆಗಳ 200 ಕ್ಕೂ ಹೆಚ್ಚು ಕಾರ್ಯಕರ್ತರು ಖುರೇಷಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗಂಜ್ದುಂಡ್ವಾರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದರು

Join Whatsapp