ರಷ್ಯಾದ ಕದನವಿರಾಮ ಷರತ್ತು ತಿರಸ್ಕರಿಸಿದ ಉಕ್ರೇನ್

Prasthutha|

ಮಾಸ್ಕೊ: ಗಡಿರೇಖೆಯಲ್ಲಿರುವ ಉಕ್ರೇನ್ ಸೇನೆಯನ್ನು ಹಿಂದಕ್ಕೆ ಪಡೆದು ನ್ಯಾಟೊದಿಂದ ತನ್ನ ಸದಸ್ಯತ್ವ ಹಿಂಪಡೆದರೆ ಕದನವಿರಾಮ ಘೋಷಿಸಲಾಗುವುದು ಎಂಬ ರಷ್ಯಾದ ಷರತ್ತನ್ನು ಉಕ್ರೇನ್ ತಿರಸ್ಕರಿಸಿದೆ.

- Advertisement -

ರಷ್ಯಾದ ಪೂರ್ವ ಹಾಗೂ ದಕ್ಷಿಣದಲ್ಲಿ ಜಮಾವಣೆಗೊಂಡಿರುವ ತನ್ನ ಸೇನೆಯನ್ನು ಹಿಂಪಡೆದು ಶರಣಾದಲ್ಲಿ ಹಾಗೂ ನ್ಯಾಟೊ ಸದಸ್ಯತ್ವದಿಂದ ಹಿಂದೆ ಸರಿದಲ್ಲಿ ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗೆ ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಹೇಳಿದ್ದಾರೆ.

ಆದರೆ ಈ ಪ್ರಸ್ತಾವನೆಯನ್ನು ಉಕ್ರೇನ್‌ ತಿರಸ್ಕರಿಸಿದ ಉಕ್ರೇನ್, ರಷ್ಯಾ ನಂಬಿಕೆಗೆ ಅರ್ಹವಲ್ಲದ ರಾಷ್ಟ್ರ. ಕದನ ವಿರಾಮ ಘೋಷಿಸಿದ ಮೇಲೂ ತನ್ನ ವಿರುದ್ಧ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದೆ.

- Advertisement -

2022ರ ಫೆಬ್ರುವರಿಯಿಂದ ಆರಂಭಗೊಂಡ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಕೊನೆಗಾಣಿಸಲು ಪುಟಿನ್ ಈಗ ಷರತ್ತುಗಳನ್ನು ವಿಧಿಸಿದ್ದಾರೆ. ರಷ್ಯಾದ ದಾಳಿಯನ್ನು ವಿರೋಧಿಸಿ ಜಗತ್ತಿನ ವಿವಿಧೆಡೆ ನಡೆಯುತ್ತಿರುವ ಜಾಗತಿಕ ಶೃಂಗಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವ ವೊಲೊಡಿಮಿರ್‌ ಝೆಲೆನ್‌ಸ್ಕಿ, ವಿಶ್ವದ ನಾಯಕರ ಬೆಂಬಲ ಕೋರುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಉಕ್ರೇನ್ ರಾಜಧಾನಿ ಕೀವ್‌ ಮೇಲೆ ದಾಳಿ ನಡೆಸಿದ ನಂತರ ಒಂದು ಬಾರಿಯೂ ಉಭಯ ರಾಷ್ಟ್ರಗಳ ನಡುವೆ ಶಾಂತಿಯ ಮಾತುಕತೆ ನಡೆದಿಲ್ಲ. ಮಾತುಕತೆಗೂ ಮುನ್ನ ಉಭಯ ರಾಷ್ಟ್ರಗಳ ನಡುವಿನ ಅಂತಾರಾಷ್ಟ್ರೀಯ ಗಡಿರೇಖೆಯಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ರಷ್ಯಾಗೆ ಉಕ್ರೇನ್ ತಾಕೀತು ಮಾಡಿದ್ದು, ಉಕ್ರೇನ್ ತಿರಸ್ಕರಿಸಿದೆ.

Join Whatsapp