ಲಖನೌ : ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಕುಖ್ಯಾತಿಯ ಬಲವಂತದ ಮತಾಂತರ ತಡೆ ಕಾನೂನು ಜಾರಿಯಾಗಿ ಒಂದು ತಿಂಗಳಾಗಿದ್ದು, ಈ ಒಂದು ತಿಂಗಳಲ್ಲಿ ಇಲ್ಲಿವರೆಗೆ 35 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಕಾನೂನು ಬಾಹಿರ ಧಾರ್ಮಿಕ ಮತಾಂತರ ತಡೆ ವಿಧೇಯಕಕ್ಕೆ ನ.27ರಂದು ಸುತ್ತೋಲೆ ಜಾರಿಗೊಳಿಸಲಾಗಿತ್ತು. ಈ ಕಾನೂನು ಅಧಿಕೃತವಾಗಿ ಜಾರಿಯಾದ ಬಳಿಕ ಒಂದು ಡಜನ್ ನಷ್ಟು ಕೇಸ್ ಗಳು ದಾಖಲಾಗಿವೆ.
ಇಟಾ ಪ್ರದೇಶದಲ್ಲಿ ಎಂಟು, ಗ್ರೇಟರ್ ನೋಯ್ಡಾದಲ್ಲಿ ಏಳು, ಶಾಜಹಾನ್ ಪುರ ಮತ್ತು ಅಝಂಗಢದಲ್ಲಿ ತಲಾ ಮೂರು, ಮೊರಾದಾಬಾದ್, ಮುಝಾಫರ್ ನಗರ, ಬಿಜ್ನೂರ್, ಕನೌಜ್ ನಲ್ಲಿ ತಲಾ ಎರಡು, ಬರೇಲಿ, ಹರ್ದೋಯಿಯಲ್ಲಿ ತಲಾ ಒಬ್ಬರನ್ನು ಈ ಕಾನೂನಿನಡಿ ಬಂಧಿಸಲಾಗಿದೆ.