ಕುಲಪತಿ ಹುದ್ದೆಗೆ ಲಾಬಿ| ವಂಚನೆ ಜಾಲದ ಹಿಂದಿನ ಷಡ್ಯಂತ್ರವನ್ನು ಬಯಲುಗೊಳಿಸಿ : SDPI

Prasthutha|

ಮಂಗಳೂರು : ಕುಲಪತಿ ಹುದ್ದೆ ಒದಗಿಸಿಕೊಡುವುದಾಗಿ ನಂಬಿಸಿ 17.50 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಹಿಂದೂ ಸಂಘಟನೆಗಳ ನಾಯಕ ಮತ್ತು ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ನನ್ನು ಬಂಧನಗೊಳಿಸಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಈ ಪ್ರಕರಣದಲ್ಲಿ ಸಂಸದರ,ಶಾಸಕರ ಮತ್ತು ಹಿಂದುತ್ವ ನಾಯಕರ ಪಾಲೆಷ್ಟು ಎಂಬುದನ್ನು ತನಿಖೆಗೆ ಒಳಪಡಿಸಿ ವಂಚನೆ ಜಾಲದಲ್ಲಿ ಜಾಲದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಎಂದು SDPI ಒತ್ತಾಯಿಸಿದೆ.

- Advertisement -

ಪ್ರಸ್ತುತ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸ್ತಾ ಇದೆ. ಆದರೆ ಎಲ್ಲಾ ಕಡೆಯು ಭ್ರಷ್ಟಾಚಾರ, ಲಾಬಿ,ವಂಚನೆ ನಡೆಯುತ್ತಲೇ ಇದೆ, ದ.ಕ ಜಿಲ್ಲೆಯಲ್ಲಿ ಕೂಡ ಸರ್ಕಾರಿ ಅಧಿಕಾರಿಗಳನ್ನು ತಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಮಾಡುವುದು,ಉನ್ನತ ಹುದ್ದೆಗೆ ಪ್ರೊಮೋಷನ್ ಕೊಡಿಸುವಂತಹ ದೊಡ್ಡ ಲಾಬಿಯೆ ಇದರ ಹಿಂದಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ.ಕುಲಪತಿ ಹುದ್ದೆಗೆ ನೇಮಕ ಮಾಡುವುದಾಗಿ ಹೇಳಿ ರಾಮಸೇನೆಯ ಸಂಸ್ಥಾಪಕ  ಲಕ್ಷ ಗಟ್ಟಲೆ ವಂಚಿಸಿರುವುದೆ ಇದಕ್ಕೆ ಬಹು ದೊಡ್ಡ ದೃಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ಯಾರೆಲ್ಲ ಬಾಗಿಯಾಗಿದ್ದಾರೆ,ಇದರಲ್ಲಿ ಸಂಸದರ,ಶಾಸಕರ ಮತ್ತು ಹಿಂದುತ್ವ ನಾಯಕರ ಪಾಲೆಷ್ಟು ಎಂಬುದನ್ನು ತನಿಖೆಗೆ ಒಳಪಡಿಸಿ ವಂಚನೆ ಜಾಲದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯ ಬೇಕು ಹಾಗೆಯೇ ಅವರ ಮೇಲೆ ವಂಚನೆಯ ದೂರು ದಾಖಲಾಗಬೇಕೆಂದು SDPI ದ.ಕ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Join Whatsapp