ನಿಂತಲ್ಲೇ ಬರುತ್ತೇ ಪಂಚರ್ ಅಂಗಡಿ..!

Prasthutha|

🖊️Anon Suf

- Advertisement -

ಬೆಂಗಳೂರು: ಇದೇ ಮೊಟ್ಟ ಮೊದಲ ಬಾರಿಗೆ ಯಾವುದೇ ರೀತಿಯ ವಾಹನ ಸವಾರರು ನಿಂತ ಜಾಗದಲ್ಲೇ ‘ಪಂಚರ್ ಸರ್ವೀಸ್’ ಪಡೆಯುವ ವಿನೂತನ‌ ಆ್ಯಪ್ ಒಂದನ್ನು ಹೊರತರಲಾಗಿದೆ.

ರಾಜಧಾನಿ ಬೆಂಗಳೂರಿನ ಬ್ಲಾಕ್ ಪೆನ್ ಕಮ್ಯೂನಿಕೇಶನ್ಸ್ ಕಂಪನಿಯ ಸಹಯೋಗದೊಂದಿಗೆ ಲೈವ್ ಪಂಚರ್ (LIVE PUNCHER) ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದರ ಬಳಕೆಯೂ ಸಂಪೂರ್ಣ ಉಚಿತವಾಗಿದ್ದು, ಪಂಚರ್ ಕಾರ್ಮಿಕರ ಮತ್ತು ವಾಹನ ಸವಾರರ ನಡುವೆ ಸಂಪರ್ಕ ಬೆಳೆಸುವುದೇ ಈ ಆ್ಯಪ್ ನ ಮುಖ್ಯ ಉದ್ದೇಶವಾಗಿದೆ.

- Advertisement -

ಸದ್ಯ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ‌ಈ ಆ್ಯಪ್ ಲಭ್ಯವಿದ್ದು , ವಾಹನ ಸವಾರರು ಪ್ಲೇ ಸ್ಟೋರ್ ಅಪ್ಲಿಕೇಶನ್ ನಲ್ಲಿ ಡೋನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಬಳಕೆ, ಕಾರ್ಯ ಹೇಗೆ?: ಈ ಆ್ಯಪ್ ಅನ್ನು ಡೋನ್ ಲೋಡ್ ಮಾಡಿಕೊಂಡ ಬಳಿಕ ವಾಹನ ಸವಾರರು, ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಾಹನದ ಚಕ್ರಗಳೆಷ್ಟು ಎಂದು ನಮೂದಿಸಿದ ಬಳಿಕ ಆ್ಯಪ್ ಬಳಕೆ ಮಾಡಬಹುದಾಗಿದೆ.

ಉದಾಹರಣೆಗೆ ಒಂದು ವೇಳೆ ನೀವೂ ಕಚೇರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ನಿಮ್ಮ ವಾಹನದ ಚಕ್ರ ಪಂಚರ್ ಆಗಿ ಸಮಸ್ಯೆ ಉಲ್ಬಣಗೊಂಡಿದೆ ಎಂದುಕೊಳ್ಳಿ. ಆಗ ಈ ಆ್ಯಪ್ ತೆರೆದು ನೀವು ನಿಮ್ಮ ಹತ್ತಿರದಲ್ಲೇ ಯಾವ ಪಂಚರ್ ಅಂಗಡಿ‌ ಇದೆ ಎಂದು ನೋಡಬಹುದು. ಬಳಿಕ ಅವರಿಗೆ ಮೊಬೈಲ್ ಕರೆ ಮಾಡಿ, ನಿಮ್ಮ ವಾಹನದ ಬಳಿಯೇ ಕರೆಸಿಕೊಳ್ಳಬಹುದು. ಜೊತೆಗೆ, ಎಷ್ಟು ಹೊತ್ತಿಗೆ, ಎಲ್ಲಿ ಬರುತ್ತಿದ್ದಾರೆ ಎಂದು ಲೈವ್ ನೋಡಬಹುದಾಗಿದೆ.

ಕಾರ್ಮಿಕರಿಗೆ ಅನುಕೂಲ: ಇದೊಂದು ಆ್ಯಪ್ ಅಸಂಘಟಿತ ವಲಯದ ಪಂಚರ್ ಕಾರ್ಮಿಕರ ಅನುಕೂಲಕ್ಕೆ ಮಾಡಲಾಗಿದ್ದು, ಕಂಪನಿಯೂ ಯಾವುದೇ ರೀತಿಯ ಶುಲ್ಕ ಅಥವಾ ಕಮಿಷನ್ ಪಡೆಯುತ್ತಿಲ್ಲ. ಬದಲಾಗಿ, ನೇರವಾಗಿಯೇ ಗ್ರಾಹಕನೊಂದಿಗೆ ಅವರು ಆ್ಯಪ್ ಮೂಲಕ ಸಂಪರ್ಕ ಇಟ್ಟುಕೊಳ್ಳಬಹುದಾಗಿದೆ.

ಹಣದ ಚಿಂತೆ ಇಲ್ಲ..!

ಈಗಾಗಲೇ ಮಾರುಕಟ್ಟೆಗಳಲ್ಲಿ ಹಲವು ವಾಹನ ಸರ್ವೀಸ್ ಗಳ ಆ್ಯಪ್ ಗಳು ಚಾಲ್ತಿಯಲ್ಲಿವೆ. ಬಹುತೇಕರು ಗ್ರಾಹಕ ಮತ್ತು ಸರ್ವೀಸ್ ನೀಡುವವರಿಂದ ಹಣ, ಕಮಿಷನ್ ಪಡೆಯುತ್ತಾರೆ. ಆದರೆ, ಬ್ಲಾಕ್ ಪೆನ್ ಕಮ್ಯೂನಿಕೇಶನ್ಸ್ ಕಂಪನಿಯೂ ಅಸಂಘಟಿತ ವಲಯದ ಪಂಚರ್ ಕಾರ್ಮಿಕರ ಅನುಕೂಲಕ್ಕೆ ಈ ಆ್ಯಪ್ ಉಚಿತವಾಗಿ ಹೊರತಂದಿದೆ.

ಡೋನ್ ಲೋಡ್ ಹೇಗೆ?

ಯಾವುದೇ ರೀತಿಯ ವಾಹನ ಸವಾರರು ಈ ಆ್ಯಪ್ ಅನ್ನು ಪ್ಲೇ ಸ್ಟೋರ್ ನಲ್ಲಿ LIVE PUNCHER ಎಂದು ಟೈಮ್ ಮಾಡಿ, ಈ ಲಭ್ಯ ಪಡೆಯಬಹುದು. ಅಥವಾ https://play.google.com/store/apps/details?id=com.livepuncherapp

ಈ ಲಿಂಕ್ ನೋಡಬಹುದು.

ಪಂಚರ್ ಅಂಗಡಿ ನೋಂದಾಯಿಸಿ..!

ಯಾವುದೇ ಪ್ರದೇಶದಲ್ಲಿ ಪಂಚರ್ ಅಂಗಡಿಯನ್ನು ಇಟ್ಟುಕೊಂಡಿರುವ ಮಾಲೀಕರು ಈ ಆ್ಯಪ್ ನಲ್ಲಿ ಪ್ರವೇಶಿಸಿ ತಮ್ಮ ವಿವರ ನೋಂದಾಯಿಸಿಕೊಳ್ಳಬಹುದು. ಆನಂತರ ಹತ್ತಿರದ ಗ್ರಾಹಕರನ್ನು ಸಂಪರ್ಕಿಸಬಹುದು‌.

ಸಮಯ ಉಳಿಸಬಹುದು..!

ವಾಹನಗಳ ಪಂಚರ್ ಯಿಂದ ಬಹಳಷ್ಟು ಸಮಯ ವ್ಯರ್ಥ ಆಗುತ್ತದೆ. ಜೊತೆಗೆ, ಅದನ್ನು ತಳ್ಳಿಕೊಂಡು ಹೋಗುವುದು ಕಷ್ಟಕರ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ವಾಹನ ಚಲಾನೆ ಸಂದರ್ಭದಲ್ಲಿ ಪಂಚರ್ ಸಮಸ್ಯೆ ನಾನೇ ಸ್ವತಃ ಎದುರಿಸಿದ್ದೇನೆ. ಹೀಗಾಗಿಯೇ, ವಾಹನ ಸವಾರರ ಹಾಗೂ ಪಂಚರ್ ಕಾರ್ಮಿಕರ ಅನುಕೂಲಕ್ಕಾಗಿ ಈ ಆ್ಯಪ್ ಹೊರತರಲಾಗಿದೆ ಎಂದು LIVE PUNCHER APP ಸಹ ಸಂಸ್ಥಾಪಕ ಸಮೀರ್ ದಳಸನೂರು ತಿಳಿಸಿದ್ದಾರೆ.



Join Whatsapp