ಉಕ್ರೇನ್’ನಿಂದ ಮಂಗಳೂರಿಗೆ ಮರಳಿದ ವೈದ್ಯಕೀಯ ವಿದ್ಯಾರ್ಥಿನಿ ಅನುಷಾ ಭಟ್

Prasthutha|

ಮಂಗಳೂರುಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನಗರದ ಬಿಜೈ ನಿವಾಸಿ ಅನುಷಾ ಭಟ್, ಗುರುವಾರ ಸುರಕ್ಷಿತವಾಗಿ ಮಂಗಳೂರಿಗೆ ಬಂದಿಳಿದಿದ್ದಾರೆ.

- Advertisement -

ಬಳಿಕ ಮಾತನಾಡಿದ ಅನುಷಾ, ಉಕ್ರೇನ್ ಸೈನಿಕರು ನಮ್ಮನ್ನು ಗಡಿಯವರೆಗೆ ಬಿಟ್ಟು ಬಂದರು. ನಂತರ ನಾವು ರೊಮೇನಿಯಾಕ್ಕೆ ತೆರಳಿ ಅಲ್ಲಿನ ಆಶ್ರಯ ಕೇಂದ್ರದಲ್ಲಿ ಉಳಿದುಕೊಂಡಿದ್ದೆವು.‌ ರೊಮೇನಿಯಾದಿಂದ ಭಾರತೀಯ ಅಧಿಕಾರಿಗಳು ಮುಂಬೈಗೆ ವಿಮಾನ ವ್ಯವಸ್ಥೆ ಮಾಡಿದ್ದು, ಇದೀಗ ಮುಂಬೈನಿಂದ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಕೂಡ ವಿಮಾನ ನಿಲ್ದಾಣದಲ್ಲಿ ಅನುಷಾ ಅವರನ್ನು ಸ್ವಾಗತಿಸಿದರು.

Join Whatsapp