ಆಝಾನ್’ನಿಂದ ಶಬ್ಧ ಮಾಲಿನ್ಯ ಆರೋಪ: ಏಳು ಮಸೀದಿಗಳಿಗೆ ದಂಡ

Prasthutha|

ಹರಿದ್ವಾರ: “ಧ್ವನಿವರ್ಧಕ ಬಳಸಿ ಅಝಾನ್ ಕೂಗಿದ್ದರಿಂದ ಶಬ್ದ ಮಾಲಿನ್ಯ ಉಂಟಾಗಿದೆ ಎಂದು ಆರೋಪಿಸಿ ಉತ್ತರಾಖಂಡದ ಹರದ್ವಾರದಲ್ಲಿ ಏಳು ಮಸೀದಿಗಳಿಗೆ ತಲಾ ರೂ. 5,000 ದಂಡ ವಿಧಿಸಲಾಗಿದೆ.
ಎಸ್’ಡಿಎಂ ಪುರಾನ್ ಸಿಂಗ್ ರಾಣಾ ಅವರು ತಮ್ಮ ಅಧಿಕಾರ ಬಳಸಿ ಈ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.
” ಕೆಲವು ಪರಿಸ್ಥಿತಿಗಳಲ್ಲಿ ಒಂದು ಮಟ್ಟದಲ್ಲಿ ಧ್ವನಿವರ್ಧಕ ಬಳಸಬಹುದು ಎಂದು ನೈನಿತಾಲ್ ಉಚ್ಚ ನ್ಯಾಯಾಲಯ ಮತ್ತು ಸರಕಾರಿ ನಿರ್ದೇಶನಗಳು ಇದ್ದರೂ ಅಧಿಕಾರಿಗಳ ದರ್ಬಾರು ನಡೆದಿದೆ.
ಏಳು ಮಸೀದಿಗಳು ನಿಯಮಿತ ಶಬ್ದಕ್ಕಿಂತ ಹೆಚ್ಚಿನ ಶಬ್ದ ಮಾಡಿವೆ ಎಂದು ಆಪಾದಿಸಲಾಗಿದೆ.
ಸದರ್ ಪತ್ರಿ ಪೊಲೀಸ್ ಠಾಣೆಯಲ್ಲಿ ಮತ್ತು ರೂರ್ಕೀ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಈ ಬಗ್ಗೆ ನೋಟಿಸ್ ಅಂಟಿಸಲಾಗಿದೆ. ನೋಟೀಸಿಗೆ ತೃಪ್ತಿಕರ ಉತ್ತರ ನೀಡದಿದ್ದರೆ ತಲಾ ರೂ 5,000ದಂತೆ ರೂ. 35,000 ದಂಡ ಕಟ್ಟುವಂತೆ ಅದರಲ್ಲಿ ಸೂಚಿಸಲಾಗಿದೆ. ಧ್ವನಿವರ್ಧಕಕ್ಕೆ ಅನುಮತಿ ಪಡೆಯುವಾಗ ಅದಕ್ಕೆ ಇತಿಮಿತಿ ನಿಯಮಾವಳಿಗಳನ್ನು ನೀಡಲಾಗಿದೆ ಮೀರಿದರೆ ದಂಡ ಕಟ್ಟಬೇಕು ಎಂದೂ ನೋಟೀಸಿನಲ್ಲಿ ಇದೆ.
ಕರ್ತಾರ್ ಪುರ್ ಆಲಿಪುರ ಜಾಮಾ ಮಸೀದಿಯ ಜಂಶೆಡ್ ಆಲಿ, ಇಬಾದುಲ್ಲಾ ಹತ್ಲಾ ಕಿಕೆರವಾಲಿಯ ಗುಜರ್ ಬಸ್ತಿ ಪತ್ರಿ ಮಸೀದಿಯ ಗುಲಾಂ ನಬಿ, ಅಲ್ಲದೆ ನಗರದ ಹೊರ ವಲಯದ ದಾನಾಪುರದ ಬಿಲಾಲ್ ಮಸೀದಿ, ದಾನಾಪುರದ ಜಾಮಿಮಾ ಮಸೀದಿ, ಪ್ರತಾರ ಘೋಷಿಪುರ ಮಸೀದಿಯ ಜುಲ್ಫಿಕರ್ ಆಲಿ, ಗಪ್ಪೂರ ಗ್ರಾಮದ ಮಸೀದಿಯ ಮುಹಮ್ಮದ್ ಮೋಹಿಬ್, ದಾನಾಪುರ ಬಸ್ತಿಯ ಮುಹಮ್ಮದ್ ಉಸ್ಮಾನ್, ಇಕ್ಕಡ್ ಖುರ್ದ್ ನ ಶರಾಫತ್ ಆಲಿ ಇವರಿಗೆಲ್ಲ ನೋಟೀಸ್ ನೀಡಿ ಎಚ್ಚರಿಸಲಾಗಿದೆ ಎಂದು ಎಸ್ ಡಿಎಂ ಪುರಾನ್ ಸಿಂಗ್ ರಾಣಾ ಹೇಳಿದ್ದಾರೆ.

Join Whatsapp